ಸಿಎಂ ಸಿದ್ದರಾಮಯ್ಯ ಅವರಿಗೆEPS 95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದವರ ವಂದನೆ

Spread the love

ಮೈಸೂರು: ಪಹಲ್ಗಾಮ್ ನಲ್ಲಿ 27 ಪ್ರವಾಸಿಗರು ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ತೆಗೆದುಕೊಂಡ ನಿರ್ಧಾರವನ್ನು EPS 95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದವರು ಸ್ವಾಗತಿಸಿದ್ದಾರೆ.

ಉಗ್ರರ ದಾಳಿಯಿಂದ ಕರ್ನಾಟಕದ ಇಬ್ಬರು ಮೃತಪಟ್ಟಿರುವುದಕ್ಕೆ ವಿಷಾದಿಸಿರುವ ಸಿದ್ದರಾಮಯ್ಯ ಅವರು ತಕ್ಷಣ ಸಚಿವ ಸಂತೋಷ್ ಲಾಡ್ ಅವರನ್ನು ಜಮ್ಮು ಕಾಶ್ಮೀರಕ್ಕೆ ಕಳುಹಿಸಿ ಅಲ್ಲಿ ಸಿಲುಕಿರುವ ಕನ್ನಡಿಗರ ಯೋಗ ಕ್ಷೇಮ ವಿಚಾರಿಸಲು ಕಳುಹಿಸಿರುವುದು ಸ್ವಾಗತಾರ್ಹ ಎಂದು
EPS 95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸ್ವಾಮಿಶೆಟ್ಟಿ ಹಾಗೂ
ಪ್ರಧಾನ ಕಾರ್ಯದರ್ಶಿ ಮೋಹನ ಕೃಷ್ಣ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆಯಾದ ಕನ್ನಡಿಗರ ಕುಟುಂಬದವರಿಗೆ
ಕರ್ನಾಟಕ ರಾಜ್ಯ ಸರ್ಕಾರದಿಂದ
ಪರಹಾರ ಕೊಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಾಮಿಶೆಟ್ಟಿ ಮತ್ತು
ಮೋಹನ ಕೃಷ್ಣ ಮನವಿ ಮಾಡಿದ್ದಾರೆ,ಮತ್ತು ಸಿಎಂ ಗೆ ನಮಸ್ಕಾರ ಸಲ್ಲಿಸಿದ್ದಾರೆ.