ಎಸ್.ರಘುನಾಥ್, ಲಕ್ಷ್ಮಿಕಾಂತ್ ಅವರಿಗೆಎನ್.ಎಂ.ನವೀನ್ ಕುಮಾರ್ ಅಭಿನಂದನೆ

Spread the love

ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯಲ್ಲಿ ಜಯ ಸಾದಿಸಿದ ಎಸ್.ರಘುನಾಥ್ ಹಾಗೂ ಲಕ್ಷ್ಮಿಕಾಂತ್ ಅವರನ್ನು ಮೈಸೂರಿನ ವಿಪ್ರ ಮುಖಂಡ ಎನ್.ಎಂ.ನವೀನ್ ಕುಮಾರ್ ಅಭಿನಂದಿಸಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025 – 2030 ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಭೂತಪೂರ್ವ ಜಯಗಳಿಸಿದ ಎಸ್.ರಘುನಾಥ್ ಹಾಗೂ ರಾಜ್ಯ ಹಿರಿಯ ಉಪಾಧ್ಯಕ್ಷರಾಗಿ ನೇಮಕಗೊಂಡ ಲಕ್ಷ್ಮಿಕಾಂತ್ ಅವರಿಗೆ ಎನ್.ಎಂ.ನವೀನ್ ಕುಮಾರ್ ಅವರು ಹಾರ ಹಾಕಿ ಅಭಿನಂದಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದ ಸಿ.ವಿ ಪಾರ್ಥಸಾರಥಿ, ಕೆ.ಆರ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಹೆಚ್.ವಿ.ಭಾಸ್ಕರ್, ಭೂಮಿಕಾ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ವಾಸುದೇವಮೂರ್ತಿ, ವಿವೇಕಾನಂದ ನಗರ ಬ್ರಾಹ್ಮಣ ಮಹಾಸಭಾ ನಿರ್ದೇಶಕ ಸಿ. ಸತೀಶ್, ಚಾಮುಂಡಿಪುರಂ ಭೂಮಿಕಾ ಅಸೋಸಿಯೇಟ್ಸ್ ಮಾಲೀಕ ಕೆ.ಎಸ್.ಸುರೇಶ್, ಎಸ್.ರಘುನಾಥ್ ರವರ ತಂಡದಿಂದ ಏಕೈಕ ಅಧಿಕೃತ ಅಭ್ಯರ್ಥಿಯಾಗಿ ಮೈಸೂರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಎಸ್.ಸತ್ಯನಾರಾಯಣ, ಮೈಸೂರಿನ ವಿಪ್ರ ಮುಖಂಡರಾದ ಪ್ರವೀಣ್ ಕುಮಾರ್, ಬಿ.ವಿ.ಗದಾಧರ, ಖ್ಯಾತ ಕಲಾವಿದರಾದ ಮೈಸೂರು ಆನಂದ್ ಹಾಗೂ ಸಂಜೆ ಸಮಯ ಪತ್ರಿಕೆ ಸಂಪಾದಕರಾದ ಅನಿಲ್ ಕುಮಾರ್ ಹಾಜರಿದ್ದರು.