ಬಲಮುರಿಯಲ್ಲಿ ಆಟವಾಡುತ್ತಿದ್ದ ಯುವಕ ನಾಪತ್ತೆ;ಇಬ್ಬರು ಬಚಾವ್

Spread the love

ಶ್ರೀರಂಗಪಟ್ಟಣ: ಬಲಮುರಿ ಕಾವೇರಿ ನದಿಯಲ್ಲಿ ಆಟವಾಡುತ್ತಿದ್ದ ಯುವಕ ನಾಪತ್ತೆಯಾಗಿದ ಘಟನೆ ನಡೆದಿದೆ.

ಯುವಕನನ್ನು ಹುಡುಕಲು ಹೋದ ಇಬ್ಬರು ಸಂಬಂಧಿಗಳು ನೀರಿನ ಸೆಳೆತದಲ್ಲಿ ಸಿಲುಕಿದ್ದರು.

ಆಗ ಕರ್ತವ್ಯ ನಿರತ ಕೆ.ಆರ್.ಎಸ್.ಠಾಣೆ ಪೊಲೀಸ್ ರೇಣುಕುಮಾರ್ ಸ್ಥಳೀಯರ ನೆರವಿನಿಂದ ಅವರಿಬ್ಬರನ್ನು ಬಚಾವ್ ಮಾಡಿದ್ದಾರೆ.

ಮಂಡ್ಯದ ನೂರಾನಿ ಬಡಾವಣೆಯ ನಿವಾಸಿ ಅಂಜಲ್(22) ನಾಪತ್ತೆಯಾದ ಯುವಕ.

ಈತನನ್ನ ಹುಡುಕಲು ಹೋದ ಇಬ್ಬರು ಸಂಬಂಧಿಗಳು ಪೊಲೀಸ್ ಸಿಬ್ಬಂದಿಯ ಸಮಯೋಚಿತ ಕಾರ್ಯದಿಂದ ಪಾರಾಗಿದ್ದಾರೆ.

ರಜೆ ಇದ್ದುದರಿಂದ ಅವರುಗಳು ಸಂಬಂಧಿಕರ ಜೊತೆ ಬಂದಿದ್ದಾಗ ನದಿಯಲ್ಲಿ ಆಟವಾಡಲು ಹೋಗಿದ್ದಾರೆ.ಆಗ ಅಂಜಲ್ ನಾಪತ್ತೆಯಾಗಿದ್ದಾನೆ.ಅಂಜಲ್ ಪತ್ತೆಗಾಗಿ ನುರಿತ ಈಜುಗಾರರಿಂದ ಶೋಧಕಾರ್ಯ ನಡೆದಿದೆ.