ಕಳವು ಮಾಲು ಮಾರಾಟ ಮಾಡಲು ಸಹಕಾರ: ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್

Spread the love

ಮೈಸೂರು: ಕಳವು ಮಾಡಿದ ಚಿನ್ನಾಭರಣ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಗೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮುಖ್ಯಪೇದೆ ರಾಜು ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು.
ವಿಚಾರಣೆ ವೇಳೆ ದೇವರಾಜ, ಶ್ರೀರಂಗಪಟ್ಟಣ,ವಿದ್ಯಾರಣ್ಯ ಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣಗಳು ಬಯಲಿಗೆ ಬಂದಿತ್ತು.

ಕಳವು ಮಾಲುಗಳನ್ನ ವಶಪಡಿಸಿಕೊಳ್ಳಲು ವಿಚಾರಣೆ ನಡೆಸಿದ ವೇಳೆ ಆರೋಪಿಗಳ ಜೊತೆ ಅಶೋಕಾಪುರಂ ಠಾಣೆಯ ಮುಖ್ಯಪೇದೆ ರಾಜು ಕಳವು ಪದಾರ್ಥಗಳನ್ನ ಮಾರಾಟ ಮಾಡಲು ಸಹಕರಿಸಿದ್ದುದು ಖಚಿತವಾಗಿದೆ.

ಹಾಗಾಗಿ ಕಮಿಷನರ್ ಸೀಮಾ ಲಾಟ್ಕರ್ ರಾಜುನನ್ನು ಸಸ್ಪೆಂಡ್ ಮಾಡಿದ್ದಾರೆ.