ಮೈಸೂರು: ಮೈಸೂರಿನ ಧನ್ವಂತರಿ ರಸ್ತೆಯಲ್ಲಿ ಬುಧವಾರ ಮುಖಂಡರಾದ ವಸಂತ್ ಅವರ ನೇತೃತ್ವದಲ್ಲಿ
ಶ್ರೀ ರಾಮನವಮಿ ಆಚರಿಸಲಾಯಿತು.

ಧನ್ವಂತಿ ರಸ್ತೆಯಲ್ಲಿ ವಸಂತ್ ಅವರ ನೇತೃತ್ವದಲ್ಲಿ ಭಕ್ತಾದಿಗಳ ವತಿಯಿಂದ ಶ್ರೀ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಸಾರ್ವಜನಿಕರಿಗೆ ಪಾನಕ ಮತ್ತು ಮಜ್ಜಿಗೆ ವಿತರಿಸಲಾಯಿತು
ಈ ಸಂದರ್ಭದಲ್ಲಿ ಮೂಡ ಮಾಜಿ ಸದಸ್ಯರಾದ ನವೀನ್ ಕುಮಾರ್, ಮುಖಂಡರುಗಳಾದ ರಾಮರಾಜ್, ವೆಂಕಿಮಾಮು, ಸೋಮಶೇಖರ ಆಚಾರ್, ರವಿಚಂದ್ರ, ಹರೀಶ್ ಗೌಡ,ಮೋಹನ್, ಅರುಣ್, ವೆಂಕಟೇಶ್, ರವಿಕುಮಾರ್, ಹಾಜರಿದ್ದರು.