ಮೈಸೂರು: ಚಾಮುಂಡೇಶ್ವರಿ ಸಹಕಾರ ಸಂಘದ ಸಂಸ್ಥಾಪಕರೂ ಯುವ ನಾಯಕರಾದ ರವಿ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ಹೆಜ್ಜೆ ರಕ್ತದಾನ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಅವರ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.
ಮೈಸೂರಿನ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಈ ಶಿಬಿರ ದಲ್ಲಿ ಹೆಣ್ಣು ಮಕ್ಕಳು ಸೇರಿದಂತೆ 29 ಮಂದಿ ರಕ್ತದಾನ ಮಾಡಿ ಮಾದರಿಯಾದರು.
ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ರಕ್ತದಾನಿ ಮಂಜು ಅವರಿಗೆ ಈ ವೇಳೆ ಜೀವದಾರ ರಕ್ತ ನಿಧಿ ಕೇಂದ್ರದ ಸಂಸ್ಥಾಪಕ ಗಿರೀಶ್ ಅವರು ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಸಂಸ್ಥಾಪಕ ಯಾದವ್ ಹಾಜರಿದ್ದರು.