ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮೈಸೂರು ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸುಬ್ಬೆಗೌಡರ 75 ನೇ ವರ್ಷದ ಹುಟ್ಟು ಹಬ್ಬ.
ಜನುಮ ದಿನದ ಅಂಗವಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಚೇರಿಯಲ್ಲಿ ರಾಜ್ಯ ಅಧ್ಯಕ್ಷ ಸಿ.ಜಿ ಗಂಗಾಧರ್ ಅವರ ನೇತೃತ್ವದಲ್ಲಿ ಸುಬ್ಬೆಗೌಡರಿಗೆ ಶುಭ ಹಾರೈಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ರಾಜ್ಯ ಘಟಕದ ಗೋವಿಂದೇಗೌಡ, ಶಿವಲಿಂಗಯ್ಯ, ವೆಂಕಟಪ್ಪ, ಲತಾ ರಂಗನಾಥ್, ನಾಗರಾಜು, ಹನುಮಂತಯ್ಯ, ಶಿವರಾಂ ಗೌಡ, ಕೃಷ್ಣಪ್ಪ , ತಮ್ಮಣ್ಣ, ಕೇದಾರ್, ಪ್ರಭಾಕರ್, ಸಂಜಯ್ ಮತ್ತಿತರರು ಉಪಸ್ಥಿತರಿದ್ದರು.