ಸತ್ತೇಗಾಲ ಗ್ರಾ ಪಂಗೆ ಅಧ್ಯಕ್ಷರಾಗಿಎಂ. ಮಲ್ಲೇಶ್ ಅವಿರೋಧ ಆಯ್ಕೆ

Spread the love

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.2: ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಎಂ. ಮಲ್ಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಪರಿಷ್ಟ ಜಾತಿಗೆ ಮೀಸಲಾಗಿದ್ದ ಸತ್ತೇಗಾಲ ಗ್ರಾಮ ಪಂಚಾಯತಿಯಲ್ಲಿ 2 ನೇ ಅವಧಿಗೆ ಆಯ್ಕೆ ಯಾಗಿದ್ದ ಹಿಂದಿನ ಅಧ್ಯಕ್ಷ  ಕೆಂಪರಾಜು ಅವರು ತಮ್ಮ 1 ವರ್ಷ 9 ತಿಂಗಳ ಅವಧಿ ಅಧಿಕಾರದ ನಂತರ ಮಾ.5 ರಂದು ವೈಯಕ್ತಿಕ ಕಾರಣದಿಂದ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಳಿದ 9 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಎಂ. ಮಲ್ಲೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸತ್ತೇಗಾಲ ಗ್ರಾಮ ಪಂಚಾಯತಿಯಲ್ಲಿ 35 ಸದಸ್ಯರ ಸಂಖ್ಯಾ ಬಲವಿದ್ದು 26 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಗ್ರಾ.ಪಂ ಕಚೇರಿಯಲ್ಲಿ ನಡೆದ ಚುನಾವಣೆಗೆ ಎಂ. ಮಲ್ಲೇಶ್ ಹೊರತುಪಡಿಸಿ ಬೇರೆ ಯಾರೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಕೊಳ್ಳೇಗಾಲ ಲೋಕೋಪಯೋಗಿ ಇಲಾಖೆಯ ಜೆ.ಇ ಸುರೇಂದ್ರ ಕುಮಾರ್ ಅವರು ಎಂ. ಮಲ್ಲೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

ಈ ವೇಳೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಎಂ. ಮಲ್ಲೇಶ್ ರವರಿಗೆ ಎಲ್ಲಾ ಸದಸ್ಯರು, ಗ್ರಾಮದ ಮುಖಂಡರು ಹಾಗೂ ಸಾರ್ವಜನಿಕರು ಹಾರ ಹಾಕಿ ಅಭಿನಂದಿಸಿ, ಪಟಾಕಿ ಸಿಡಿಸಿ ಸಿಹಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.

ಈ ವೇಳೆ ನೂತನ ಅಧ್ಯಕ್ಷ ಎಂ. ಮಲ್ಲೇಶ್ ಮಾತನಾಡಿ ನನ್ನನ್ನು ಗ್ರಾಪಂ ಅಧ್ಯಕ್ಷರಾಗಿ ಮಾಡಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನನಗೆ ಸಿಕ್ಕಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಅಲ್ಪ ಅವಧಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲವೇ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಪಂಚಾಯಿತಿಯನ್ನು ಉತ್ತಮವಾಗಿ ಅಭಿವೃದ್ಧಿಯತ್ತ ಕೊಂಡೊಯುವ ಆಶಾಭಾವನೆ ಹೊಂದಿದ್ದೇನೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಉಪಾಧ್ಯಕ್ಷೆ ಎಂ.ಎಸ್ ಸುವರ್ಣ, ಕುಮಾರಮ್ಮ, ನಾಗರಾಜು, ದೇವಿಕಾ, ದೇವಮ್ಮ, ನಾಗರಾಜು, ವೆಂಕಟನಾಯಕ, ನವೀನ್ ಕುಮಾರ್, ಲತಾ, ಜ್ಯೋತಿ, ಎಸ್.ಶಾಂತಕುಮಾರಿ, ಕವಿತಾ, ಗೋವಿಂದರಾಜು, ಮಲ್ಲೇಶ್, ಸೈಯದ್ ಜಮೀರ್ ಪಾಷ, ಮರಿನಿಂಗೆಗೌಡ, ರಾಜಮ್ಮ, ಪುಷ್ಪ, ಆರೋಗ್ಯಸ್ವಾಮಿ, ಭೈರ, ವಸಂತಮೇರಿ, ಶಿವಮಲ್ಲಮ್ಮ, ವಸಂತ, ನಾಗಣ್ಣ, ಲತಾ, ಪಿಡಿಒ ಜುನೈದ್ ಅಹಮ್ಮದ್, ಕಾರ್ಯದರ್ಶಿ ಶಿವಪ್ರಕಾಶ್ ಹಾಜರಿದ್ದರು.