ಮ್ಯಾನ್ಮಾರ್ ಗೆ ಭಾರತದ ಸಹಾಯ ಹಸ್ತ:ಅತ್ಯಗತ್ಯ ಸಾಮಗ್ರಿ ರವಾನೆ

Spread the love

ನವದೆಹಲಿ: ಮುನಿದ ಪ್ರಕೃತಿಗೆ ತುತ್ತಾಗಿರುವ ಮ್ಯಾನ್ಮಾರ್‌ಗೆ ಭಾರತ ಸಮರೋಪಾದಿಯಲ್ಲಿ ಸಹಾಯ ಮಾಡುತ್ತಿದೆ.

ಟೆಂಟ್‌ಗಳು, ಹೊದಿಕೆಗಳು, ನೆಲ ಹಾಸಿಗೆಗಳು, ಆಹಾರದ ಪೊಟ್ಟಣಗಳು, ನೈರ್ಮಲ್ಯ ಕಿಟ್‌ಗಳು, ಜನರೇಟರ್‌ಗಳು ಮತ್ತು ಅಗತ್ಯ ಔಷಧಗಳು ಸೇರಿದಂತೆ 15 ಟನ್ ಪರಿಹಾರ ಸಾಮಗ್ರಿಗಳನ್ನು ಮೊದಲ ಕಂತಿನಲ್ಲಿ ಯಾಂಗೂನ್‌ಗೆ ರವಾನಿಸಿತ್ತು.

ಇಂದು ಬೆಳಿಗ್ಗೆ ಭಾರತದ ರಾಯಭಾರಿ ಅಭಯ್ ಠಾಕೂರ್ ಅವರು ಯಾಂಗೂನ್ ಮುಖ್ಯಮಂತ್ರಿ ಯು ಸೋ ಥೀನ್ ಅವರಿಗೆ ಸಾಮಗ್ರಿಗಳನ್ನು ಹಸ್ತಾಂತರಿಸಿದರು.

ಮಂಡಲಯ್​​ನಲ್ಲಿ ಭಾರತವು ಫೀಲ್ಡ್​ ಆಸ್ಪತ್ರೆ ಸ್ಥಾಪನೆ ಮಾಡಲು ನಿರ್ಧರಿಸಿದೆ, ಅದಕ್ಕಾಗಿ ವೈದ್ಯರು ಮತ್ತು ಶುಶ್ರೂಷರು ಸೇರಿದಂತೆ 118 ತಜ್ಞರ ತಂಡ ಶನಿವಾರ ಸಂಜೆ ಅಲ್ಲಿಗೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಎರಡು ವಿಮಾನಗಳು ಮತ್ತು 80 ಮಂದಿ ಎನ್‌ಡಿಆರ್‌ಎಫ್ ತಂಡವನ್ನೂ ಮಯನ್ಮಾರ್‌ಗೆ ಕಳುಹಿಸಲಾಗಿದೆ.

ಇತ್ತ ಥಾಯ್ಲೆಂಡ್​ನಲ್ಲೂ ಕೂಡ ಭೂಕಂಪನ ಉಂಟಾಗಿದ್ದು, ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ.

ಮ್ಯಾನ್ಮಾರ್ ಮತ್ತು ಥಾಯ್ಲೆಂಡ್​ಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು ಅದರಂತೆ ಇಂದು ಅತ್ಯಗತ್ಯ ಸಾಮಗ್ರಿಗಳನ್ನು ರವಾನಿಸಲಾಗಿದೆ.