ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮಹಿಳಾ ಘಟಕದಿಂದ ಯಶೋಧರ ದಾಸಪ್ಪ ದಿನಾಚರಣೆ

Spread the love

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮೈಸೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಾಡಿನ ಸಮುದಾಯದ ಹೆಮ್ಮೆಯ ಯಶೋಧರ ದಾಸಪ್ಪನವರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.

ಮೈಸೂರಿನ ಹೋಟೆಲೊಂದರಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಲಲಿತಾ ಜಿ.ಟಿ ದೇವೇಗೌಡ ಅವರು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಯಶೋಧರ ದಾಸಪ್ಪನವರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರ, ಸ್ವಾತಂತ್ರ್ಯಕ್ಕೂ ಮುಂಚೆ ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಲ್ಲಿ ಯಶೋಧನಾ ದಾಸಪ್ಪನವರು ಭಾಗವಹಿಸಿ ನಮ್ಮ ನಾಡಿನ ಮಂಚೂಣಿ ಮಹಿಳಾ ನಾಯಕರಾಗಿದ್ದರು ಎಂದು ಸ್ಮರಿಸಿದರು.

ನಾಡಿನ ಶಾಸಕರಾಗಿ, ಸಚಿವರಾಗಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜ್ಯಕ್ಕೆ ಹಲವಾರು ನೂತನ ಕೊಡುಗೆಗಳನ್ನು ನೀಡಿದ್ದರು.ಇಂತವರ ದಿನಾಚರಣೆಯನ್ನು ಅಖಿಲ ಕರ್ನಾಟಕ ಒಕ್ಕಲಿಗ ಸಂಘ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಲಲಿತಾ ಜಿ.ಟಿ.ದೇವೇಗೌಡ‌ ಮೆಚ್ಚುಗೆ ವ್ಯಕ್ತಪಡಿಸಿದರು.

ಯಶೋಧರ ದಾಸಪ್ಪನವರ ಸೊಸೆ ಸರೋಜ ತುಳಸಿ ದಾಸಪ್ಪ ಮಾತನಾಡಿ ರಾಜ್ಯ ಕಂಡಂತಹ ಅತ್ಯದ್ಭುತ ನಾಯಕ ಹೋರಾಟಗಾರ, ಕೊಡುಗೈ ದಾನಿ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸಂಸ್ಥಾಪಕ ಕೆ. ಹೆಚ್ ರಾಮಯ್ಯನವರ ಮೊದಲನೇ ಮಗಳಾದ ಯಶೋಧರ ದಾಸಪ್ಪನವರು ರಾಜ್ಯದಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ನೂತನವಾಗಿ ಸ್ಥಾಪಿಸಿದ್ದರು ಎಂದು ತಿಳಿಸಿದರು.

ಅದರಲ್ಲೂ ವಿಶೇಷವಾಗಿ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ರಾಜ್ಯದ ಮಹಿಳೆಯರು, ಮಕ್ಕಳ ನೋವು ನಲಿವುಗಳನ್ನು ಅರಿತು ಪ್ರಪ್ರಥಮ ಬಾರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸ್ಥಾಪನೆಯಾಗಲು ಕಾರಣಕರ್ತರಾದರು. ಈಗಿನ ಮಹಿಳೆಯರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರಲ್ಲದೆ ನಾನು ಅವರ ಸೊಸೆಯಾಗಿರುವುದು ನನಗೆ ಬಹಳ ಹೆಮ್ಮೆ ಇದೆ ಎಂದು ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ಮಾತನಾಡಿ ನಾಡಿನ ಮೊಟ್ಟ ಮೊದಲ ಮಹಿಳಾ ಸಚಿವರಾಗಿದ್ದ ಯಶೋಧರ ದಾಸಪ್ಪನವರ ಕೊಡುಗೆಗಳನ್ನು ಸ್ಮರಿಸಿದರು.

ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಇಲಾಖೆಯ ಯಾವುದಾದರೂ ಒಂದು ಪ್ರಮುಖ ಯೋಜನೆಗೆ ಶ್ರೀಮತಿ ಯಶೋಧರ ದಾಸಪ್ಪನವರ ಹೆಸರು ಇಡಬೇಕು ಮತ್ತು ಮೈಸೂರಿನ ಒಂದು ಪ್ರಮುಖ ವೃತ್ತಕ್ಕೆ ಅವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರಾದ ಕ್ರೀಡಾ ಕ್ಷೇತ್ರ- ಕುಮಾರಿ ರಕ್ಷಿತಾ ಕೃಷ್ಣಪ್ಪ, ನಟನೆ- ಕ್ಷೇತ್ರದ ಗೀತಾ ಮೋಂಟಡ್ಕ, ರಾಜಕೀಯ ಕ್ಷೇತ್ರ- ಮೋದಾಮಣಿ, ಉದ್ಯಮ ಕ್ಷೇತ್ರ- ಗೀತಾ ರುಕ್ಮಾಂಗದ, ಸಮಾಜ ಸೇವೆ- ಗೀತಾ ಪುಟ್ಟಸ್ವಾಮಿ, ರಾಜಕೀಯ ಕ್ಷೇತ್ರ- ಮೂಡಾ ಎಸ್ ಲಕ್ಷ್ಮೀದೇವಿ, ಕನ್ನಡ ಸಂಘಟನೆ ಕ್ಷೇತ್ರ- ಸುಜಾತಾ ಕೃಷ್ಣ ಸಿ.ಜೆ, ಸಹಕಾರ ಕ್ಷೇತ್ರ- ಸುಶೀಲ ನಂಜಪ್ಪ ಅವರಿಗೆ ರಾಷ್ಟ್ರಕವಿ ಕುವೆಂಪುರವರ ಸುಪುತ್ರಿ ತಾರಿಣಿ ಚಿದಾನಂದ್ ಅವರು ಶ್ರೀಮತಿ ಯಶೋಧರ ದಾಸಪ್ಪ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಅಧ್ಯಕ್ಷೆ ಲತಾ ರಂಗನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರರಾದ ಶಾಂತಕುಮಾರಿ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮ ದಲ್ಲಿ ವನಜಾ ಲೋಕೇಶ್, ಪದ್ಮ, ಹೇಮಲತಾ ಡಿ.ಕೆ,ರೇಣುಕಾ,
ವಸಂತಾ ಶ್ರೀಕಂಠಯ,ಗಾಯಿತ್ರಿ ನಾರಾಯಣ್ ಗೌಡ,ಲತಾ ಮುದ್ದಪ್ಪ, ಮಂಜುಳಾ, ನಳಿನಿ,ನಾಗರತ್ನ, ಜಯಲಕ್ಷ್ಮಿ, ಮುದ್ದೆಗೌಡ್ರು, ಅನಿತ ನಾರಾಯಣ್ ,ವನಜಾ,ಸೌಭಾಗ್ಯ, ಶಾಂತಾ ಜಯರಾಂ, ಲಕ್ಷ್ಮಿಶಿವರಾಜ್, ಲೀಲಾವತಿ, ಸುಧಾ ,ಶಿಲ್ಪಾ, ಉಷಾ, ಪ್ರಮೀಳ, ಹೇಮಲತಾ,ಗೀತಾ, ಜ್ಯೋತಿ,ಶೋಭಾ, ಅರುಣಾ, ಶೀಲಾ, ಛಾಯಾ, ಇಂದೂ,ಅರುಣಾ , ರಶ್ಮಿ, ನೇಹಾ, ಭಾಗ್ಯಮ್ಮ, ಯಶೋದಾ, ಮಾಯಾ, ಉಮಾ ಮತ್ತಿತರರು ಉಪಸ್ಥಿತರಿದ್ದರು.