ಮೈಸೂರು:ಮೈಸೂರಿನ ಮಹಾರಾತ್ನ ಟ್ರಸ್ಟ್ ವತಿಯಿಂದ ಬಸವ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಲೇಖಕಿ ಬಿ ಆರ್ ನಾಗರತ್ನ ಅವರು ಮಾತನಾಡಿ,ತಾವು ರಚಿಸಿದ್ದ ಹಲವು ಕಥೆಗಳಲ್ಲಿ ಕೆಲವು ಕಥೆಗಳನ್ನು ಹೇಳುವ ಮುಖೇನ ಅಬಲೆಯಾರಾದ ಮಹಿಳೆಯರು ಸಬಲೆಯರಾಗಿ ಸ್ಪೂರ್ತಿಯಿಂದ ಸಮಾಜದಲ್ಲಿ ಬದುಕಲು ಸಮಾಜವು ಅವಕಾಶ ಕಲ್ಪಿಸಿ, ನಿರ್ಭೀತಿಯಿಂದ ನಿಸಂಕೋಚದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ. ವನಿತಾ ಅವರು ಮಾತನಾಡಿ ಈಗಲೂ ಗಂಡು ಮಗು ಜನಿಸಿದರೆ ಸಿಹಿ ಹಂಚಿ ಸಂಭ್ರಮಿಸುವ ಕುಟುಂಬದವರು ಹೆಣ್ಣು ಮಗು ಜನಿಸಿದರೆ ಸಂಭ್ರಮಿಸುವುದಿಲ್ಲ ಇನ್ನು ನಾವು ಯಾವ ಕಾಲದಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಮಗೆಲ್ಲರಿಗೂ ಮತ ಹಾಕುವ ದೊಡ್ಡ ಅಸ್ತ್ರದ ಹಕ್ಕು ಇರುವುದನ್ನು ಸರಿಯಾದ ವ್ಯಕ್ತಿಗೆ ಮಹಿಳಾ ಸಮಾಜವನ್ನು ಗೌರವಿಸುವ ವಾತಾವರಣವನ್ನು ನಿರ್ಮಿಸುವವರಿಗೆ ಮತ ಹಾಕಿ ಜವಾಬ್ದಾರಿ ಮೆರೆಯಿರಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಾಗೆ ಮಕ್ಕಳನ್ನು ಬೆಳೆಸಿ ಅವರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಮಾಡಿ ಎಂದು ಕರೆ ನೀಡಿದರು.
ಅಧ್ಯಕ್ಷೀಯ ಭಾಷಣವನ್ನು ಸಿ ವಿ ಪಾರ್ಥಸಾರಥಿ ಅವರು ಆಡಿದರು, ಇದಕ್ಕೂ ಮುನ್ನ ಮಹಾರತ್ನ ಸಂಗೀತ ಶಾಲೆಯ ವಿದ್ಯಾರ್ಥಿಗಳು ಪ್ರಾಥಿಸಿದರು.
ಮಹಾರತ್ನ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಮೈಸೂರು ಮಹಾಲಿಂಗ ಎಂ ಅವರು ಪ್ರಾಸ್ಥಾವಿಕ ನುಡಿಗಳನ್ನು ಆಡಿದರು.
ಚನ್ನಬಸಪ್ಪ, ಸಂದೇಶ ಕುಮಾರ್, ಕಾರ್ಯದರ್ಶಿ ರೂಪ ಮತ್ತು ಖಜಾಂಚಿ ನಾಗರತ್ನ ಎಂ ಉಪಸ್ಥಿತರಿದ್ದರು.

ಬೆಳಗ್ಗೆ ಮಹಿಳೆಯರಿಗಾಗಿ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸದರಿ ಕಾರ್ಯಕ್ರಮವನ್ನು ಮೈಸೂರು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಪಿ ಶಿವಣ್ಣ ಅವರು ಉದ್ಘಾಟಿಸಿ ಬಸವ ಅಂಬೇಡ್ಕರ್ ಅವರು ತಮಗೆ ನೀಡಿದ ಸ್ವಾತಂತ್ರವನ್ನು ತಮ್ಮ ಹಕ್ಕನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.