ಮೈಸೂರು: ಮೈಮಲ್ ಅಧ್ಯಕ್ಷರಾದ ಆರ್. ಚೆಲುವರಾಜು ಅವರನ್ನು ಕಾಂಗ್ರೆಸ್ ಮುಖಂಡರು ಸೌಹಾರ್ದ ಯುತ ಭೇಟಿ ಮಾಡಿದರು.
ಮೈಸೂರಿನ ಬನ್ನೂರು-ಟಿ ನರಸೀಪುರ ಮುಖ್ಯ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಕಚೇರಿಯಲ್ಲಿ ಮೈಮಲ್ ಅಧ್ಯಕ್ಷರಾದ ಆರ್. ಚೆಲುವರಾಜು ಅವರನ್ನು ಚಾಮುಂಡೇಶ್ವರಿ ಕ್ಷೇತ್ರದ ಕೆಪಿಸಿಸಿ ಸದಸ್ಯ ನಜರ್ ಬಾದ್ ನಟರಾಜ್ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಿ ಎನ್ ನಟರಾಜು ಭೇಟಿ ಮಾಡಿ ಕುಶಲೊಪರಿ ವಿಚಾರಿಸಿದರು.