ಮೈಸೂರು: ನಾಗರಿಕತೆಗಳು ಬೆಳೆದಿದ್ದೇ ನೀರಿನಲ್ಲಿ, ನೀರಿಲ್ಲದೆ ಜೀವವಿಲ್ಲ ಹಾಗಾಗಿ ನಾವೆಲ್ಲರೂ ನೀರನ್ನು ಬಹಳ ಜವಾಬ್ದಾರಿಯಿಂದ ಬಳಸಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಕರೆ ನೀಡಿದರು.
ನಗರದ ನಜರ್ಬಾದ್ ನಲ್ಲಿ ದಕ್ಷಿಣ ಪಾಕ
ಹೋಟೆಲ್ ನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ನೀರಿನ ಮಹತ್ವದ ಜಾಗೃತಿಯುಳ್ಳ ಕರ ಪತ್ರವನ್ನು ಅಂಟಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೋಟೆಲ್ ಗಳಲ್ಲಿ ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಸಂರಕ್ಷಿಸಬೇಕೆಂದು
ಮನವಿ ಮಾಡಿದರು.
ನೀರಿನ ಮಹತ್ವ ಮೂಡಿಸಬೇಕಾ ದದ್ದು
ಹೋಟೆಲ್ ಗಳ ಹೊಣೆಗಾರಿಕೆಯೂ ಹೌದು. ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿ ಸುವತ್ತ ಹೋಟೆಲ್‌ಗಳು ಹೆಜ್ಜೆ ಇಡಬೇಕಾಗಿದೆ. ಗ್ರಾಹಕರು ಏನಾದರೂ ಅಂದು ಕೊಳ್ಳಲಿ. ಆದರೆ ನೀರನ್ನು ಮಿತವಾಗಿ ಬಳಸಿ ಎಂಬಂತಹ ಜಾಗೃತಿಯ ಬರಹ ಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸು ವಂತೆ ಪ್ರಕಟಿಸುವುದು ಒಳಿತು ಎಂದು ಸಲಹೆ ನೀಡಿದರು.
ನೀರಿನ ತೀವ್ರತೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿ ನಲ್ಲಿ ನೀರಿನ ಮಹತ್ವವಾದ ಜಾಗೃತಿಯ ಪೋಸ್ಟರ್‌ಗಳನ್ನು ಅಂಟಿಸಿ ಇನ್ನು ಹೆಚ್ಚು ಗ್ರಾಹಕರಿಗೆ ಜಾಗೃತಿ ಮೂಡಿಸಲು ಮುಂದಾಗೋಣ ಎಂದು ಹೇಳಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಜತ್ತಿ ಪ್ರಸಾದ್, ಮಹಾನ್ ಶ್ರೇಯಸ್, ಎಸ್ ಎನ್ ರಾಜೇಶ್, ರಾಕೇಶ್ ಮತ್ತಿತರರು ಹಾಜರಿದ್ದರು.