ಮೈಸೂರು: ಹೆಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ವಿಪ್ರ ಬಾಂಧವರಿಗೆ ಒಂಟಿಕೊಪ್ಪಲ್ ಪಂಚಾಂಗವನ್ನು
ವಿತರಿಸಲಾಯಿತು.
ಅಗ್ರಹಾರದ ಉತ್ತರಾದಿ ಮಠದ ಶ್ರೀ ದೇವೇಂದ್ರ ತೀರ್ಥ ಪ್ರತಿಷ್ಠಾನ ರಾಘವೇಂದ್ರ ಸ್ವಾಮಿ ಮಠದಲ್ಲಿ ಒಂಟಿಕೊಪ್ಪಲ್ ಪಂಚಾಂಗ
ವನ್ನು ಉತ್ತರಾದಿ ಮಠದ ವ್ಯವಸ್ಥಾಪಕರಾದ ಪಂಡಿತ್ ಅನಿರುಧ್ ಆಚಾರ್ಯ ಪಾಂಡುರಂಗಿ ಅವರು ವಿತರಿಸಿ ಶುಭ ಕೋರಿದರು.
ಈ ವೇಳೆ ಹೆಚ್ ವಿ ರಾಜೀವ್ ಸ್ನೇಹ ಬಳಗದ ಸಂಚಾಲಕರಾದ ಎಸ್ ಬಿ ವಾಸುದೇವಮೂರ್ತಿ, ರಂಗನಾಥ್, ಶೇಷಪ್ರಸಾದ್, ಪ್ರಮೋದ್ ಆಚಾರ್ಯ,
ಬಾಗೇವಾಡಿ ಆಚಾರ್ಯ,
ಸಂಪತ್ ,ಭಾರದ್ವಾಜ್ ಮತ್ತಿತರರು ಹಾಜರಿದ್ದರು.