ತುಮಕೂರು: ಶ್ರೀಸಿದ್ದಲಿಂಗೇಶ್ವರ ಅನಾಥಾಲಯ, ಶ್ರೀ ಸಿದ್ದಗಂಗಾಮಠ, ತುಮಕೂರು ಜಿಲ್ಲೆ ಇದರ 2025-26ನೇ ಸಾಲಿಗೆ ಅರ್ಜಿಗಳನ್ನು ಮೇ 5 ರಿಂದ ಮೇ10- ರವರೆಗೆ ಕೊಡಲಾಗುವುದು.
ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3ನೇ ತರಗತಿಯಿಂದ 8ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಅರ್ಜಿಯನ್ನು ಪಡೆಯಬಹುದಾಗಿದೆ.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆ ಕೊಡಲಾಗುವುದು.
ಸರಿಯಾಗಿ ಭರ್ತಿ ಮಾಡಿದ ಪ್ರವೇಶದ ಅರ್ಜಿಯ ಜೊತೆಗೆ ಆಯಾ ತಾಲ್ಲೂಕಿನ ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ ಧೃಡೀಕರಿಸಲ್ಪಟ್ಟ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರ ಸೇರಿದಂತೆ ಸಂಪೂರ್ಣ ಮಾಹಿತಿಗಳನ್ನು ನೀಡಬೇಕಿದೆ.
ಪ್ರವೇಶವನ್ನು ಅಪೇಕ್ಷಿಸುವ ವಿದ್ಯಾರ್ಥಿಗಳು 29.5.2025 ರಿಂದ ಪ್ರಾರಂಭವಾಗುವ ಸಂದರ್ಶನದ ವೇಳೆ ಖುದ್ದಾಗಿ ಬಂದು ಅಧ್ಯಕ್ಷರ ಸಂದರ್ಶನವನ್ನು ಪಡೆಯಬೇಕು. ಇದಕ್ಕೆ ಪ್ರತ್ಯೇಕವಾದ ಸಂದರ್ಶನದ ಪತ್ರಗಳನ್ನು ಕಳುಹಿಸಿಕೊಡಲಾಗುವುದಿಲ್ಲ. ಪ್ರವೇಶದ ಅರ್ಜಿಗಳನ್ನು ಅನ್ಲೈನ್ (Online) ನಲ್ಲಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರಕಟಣೆ ತಿಳಿಸಿದೆ.