ಶ್ರೀಕೃಷ್ಣಧಾಮದಲ್ಲಿ ನವೀಕೃತಗೊಂಡ ಅನ್ನಪೂರ್ಣ ಭೋಜನಶಾಲೆ ಉದ್ಘಾಟನೆ

Spread the love

ಮೈಸೂರು: ಶ್ರೀಕೃಷ್ಣಧಾಮದಲ್ಲಿ ನವೀಕೃತಗೊಂಡ ಅನ್ನಪೂರ್ಣ ಭೋಜನ ಶಾಲೆಯನ್ನು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು.

ಈ ಶುಭ ಸಮಾರಂಭದಲ್ಲಿ ಭವನದ ನವೀಕರಣಕ್ಕೆ ದಾನ ಮಾಡಿದ
ಆರ್ ಎನ್ ಮೂರ್ತಿ ಅಂಡ್ ಸನ್ಸ್ ಮತ್ತು ಇತರ ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ಮಾಡಿದ ಭಕ್ತಾದಿಗಳನ್ನು ಸನ್ಮಾನಿಸಲಾಯಿತು.

ಈ ವೇಳೆ ಶ್ರೀ ಕೃಷ್ಣ ಟ್ರಸ್ಟ್ ನ ಉಪಾಧ್ಯಕ್ಷರುಗಳಾದ ರವಿ ಶಾಸ್ತ್ರಿ,ಪಿ ಎಸ್ ಶೇಖರ್, ಕಾರ್ಯದರ್ಶಿ ಕೆ ವಿ ಶ್ರೀಧರ್, ಶ್ರೀ ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಪಿ ಜಿ ಪ್ರವೀಣ್, ಮಿತ್ರ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.