ಮೈಸೂರು: ನಗರದ ಹಳೆ ಸಂತೆಪೇಟೆಯಲ್ಲಿರುವ ಪುರಾತನ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ
ಹೋಳಿ ಹುಣ್ಣಿಮೆ ಅಂಗವಾಗಿ ವಿಜೃಂಭಣೆಯಿಂದ ರಥೋತ್ಸವ ನೆರವೇರಿತು.
ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ರಥೋತ್ಸವಕ್ಕೆ ಶಾಸಕ ಹರೀಶ್ ಗೌಡರ ಧರ್ಮಪತ್ನಿ ಗೌರಿ ಹರೀಶ್ ಗೌಡರು ಚಾಲನೆ ನೀಡಿದರು.

ರಥೋತ್ಸವ ಹಳೆ ಸಂತೆಪೇಟೆಯ ರಸ್ತೆ ಮಾರ್ಗದಿಂದ ರಮಾವಿಲಾಶ್ ರಸ್ತೆ, ಕೃಷ್ಣ ವಿಲಾಸ್ ರಸ್ತೆಯ ಮಾರ್ಗವಾಗಿ ಸಾಗಿತು
ನಂತರ ಭಕ್ತಾದಿಗಳಿಗೆ ಪ್ರಸಾದ ವಿನಯದ ನೆರವೇರಿಸಲಾಯಿತು
ಈ ವೇಳೆ ಮಾತನಾಡಿದ
ಗೌರಿ ಹರೀಶ್ ಗೌಡ, ಬಣ್ಣಗಳು ಭಾವನೆಗಳ ಪ್ರತೀಕ. ಎಲ್ಲರ ಬಾಳಲ್ಲೂ ಸುಖ-ಶಾಂತಿ, ಸಮೃದ್ಧಿ ತುಂಬಲಿ. ಆರೋಗ್ಯ ಸ್ನೇಹಿ – ಪರಿಸರ ಸ್ನೇಹಿ ಬಣ್ಣಗಳನ್ನೇ ಬಳಸಿ. ಹಬ್ಬದ ಸಡಗರದ ನಡುವೆ ಮುನ್ನೆಚ್ಚರಿಕೆಯೂ ಇರಲಿ ಎಂದು ಹೇಳಿದರು.

ಮಾಜಿ ಶಾಸಕರಾದ ಎಲ್ ನಾಗೇಂದ್ರ, ಮೂಡ ಮಾಜಿ ಅಧ್ಯಕ್ಷರಾದ ಧ್ರುವ ಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ, ಕಿಶನ್ ಹರೀಶ್ ಗೌಡ
ಸಮಿತಿಯ ಅಧ್ಯಕ್ಷರಾದ ರಾಜು, ಉಪಾಧ್ಯಕ್ಷ ಮುನವಾರ್ ಪಾಷಾ, ಕಾರ್ಯದರ್ಶಿ ಆಸಿಫ್ ಅಹಮದ್, ಸಹ ಕಾರ್ಯದರ್ಶಿ ಸೋಮಶೇಖರ್,ನಂಜುಂಡಿ, ನವೀನ್, ರವಿಚಂದ್ರ, ವಿಘ್ನೇಶ್ವರ ಭಟ್, ಸುದರ್ಶನ್, ಪ್ರವೀಣ್ ಮತ್ತಿತರರು ಭಾಗವಹಿಸಿದ್ದರು.