ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕದ‌ ಅಧಿಕಾರಿ ಬಗ್ಗೆ ಜನರ ಆಕ್ರೋಶ

Spread the love

ನಂಜನಗೂಡು,ಮಾ.11: ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ದೂರು ನೀಡಿದ್ದರಿಂದ ಅಬಕಾರಿ ಅಧಿಕಾರಿ ಸ್ಥಳಕ್ಕೆ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ಹಿಂದಿರುಗಿದ್ದು,ಗ್ರಾಮಸ್ಥರು ತೀವ್ರ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ನಂಜನಗೂಡಿನ ಬಳ್ಳೂರು ಹುಂಡಿ ಗ್ರಾಮದ ಮಹದೇವ ಈರೇಗೌಡನ ಹುಂಡಿ ಗ್ರಾಮದ ಚೆನ್ನಪ್ಪ ಅಕ್ರಮ ಮಧ್ಯದ ಚಟಕ್ಕೆ ಬಲಿಯಾಗಿದ್ದಾರು.

ಅದೇ ರೀತಿ ನಾಗಣಪುರ ಆದಿವಾಸಿ ಕಾಲೋನಿಯಲ್ಲೂ ಇಂತಹ ಪ್ರಕರಣಗಳು ನಡೆದಿವೆ.

ಬಳ್ಳೂರು ಹುಂಡಿ, ಈರೇಗೌಡನ ಹುಂಡಿ, ಅಂಜನಾಪುರ, ಮಡುವಿನಹಳ್ಳಿ, ಕೊತ್ತನಹಳ್ಳಿ ಆದಿವಾಸಿ ಕಾಲೋನಿ ಇನ್ನು ಅನೇಕ ಗ್ರಾಮಗಳಲ್ಲಿ ಪೆಟ್ಟಿ ಅಂಗಡಿ ಮತ್ತು ಗಿರಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸ್ಥಳೀಯರು ಅಬಕಾರಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಈರೇಗೌಡನ ಹುಂಡಿ,ಅಂಜನಪುರ ,ಗ್ರಾಮಕ್ಕೆ ಪರಿಶೀಲನೆಗೆ ಬಂದ ಅಬಕಾರಿ ಅಧಿಕಾರಿಗೆ ಕುಡಿದು ಬಿಸಾಡಿರುವ ಕಾಲಿ ಪ್ಯಾಕೆಟ್ ಗಳ ರಾಶಿಯ ದರ್ಶನವಾಗಿದೆ.

ಆದರೂ ಪರಿಶೀಲನೆಗೆ ಬಂದ ಅಧಿಕಾರಿ ಅಫ್ಸಲ್ ಯಾವುದೇ ಕ್ರಮ ಕೈಗೊಳ್ಳದೆ ಬರಿಗೈಲಿ ಹಿಂದಿರುಗಿದ್ದಾರೆ.ಈ ಬಗ್ಗೆ ಸ್ಥಳೀಯರು ಪ್ರಶ್ನಿಸಿದರೂ ಏನೂ ಹೇಳದೆ‌ ಹಾಗೆಯೇ ಹಿಂದಿರುಗಿದ್ದಾರೆ.

ಅಬಕಾರಿ ಅಧಿಕಾರಿ ಅಫ್ಸಲ್ ನಿರ್ಲಕ್ಷ್ಯಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,ಜತೆಗೆ ಅನುಮಾನ ಕೂಡಾ ಪಟ್ಟಿದ್ದಾರೆ. ಅಕ್ರಮ ಮಧ್ಯ ಮಾರಾಟಕ್ಕೆ ಕೂಡಲೇ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.