ಮೈಸೂರು,ಮಾ.9: ಕಳೆದ ಕೆಲವು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮೈಸೂರು ಅರಮನೆಯಲ್ಲಿನ ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ಹರಡಿ ಆತಂಕ ಸೃಷ್ಟಿ ಯಾಗಿದೆ.
ಈ ಸುದ್ದಿ ರಾಜ್ಯದಾದ್ಯಂತ ಹರಿದಾಡುತ್ತಿದೆ ಇದರ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರಲ್ಲಿ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಅಂಬಾರಿ ಸರ್ಕಾರದ ಸುಪರ್ದಿಯಲ್ಲಿರುತ್ತದೆ ಅಂದರೆ ಅರಮನೆ ಮಂಡಳಿ ಹಾಗೂ ಸರ್ಕರ ಕೂಡಾ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕಿದೆ.
ಕಳೆದ ಮೂರು ತಿಂಗಳಿಂದ ಅಂಬಾರಿ ಜನರಿಗೆ ನೋಡಲು ಸಿಕ್ಕಿಲ್ಲಾ ಹಾಗಾದರೆ ಅದು ಎಲ್ಲಿದೆ ತಿಳಿಸಲೇಬೇಕು ಎಂದು ಜನತೆ ಆಗ್ರಹಿಸಿದ್ದಾರೆ.
ಅಂಬಾರಿ ಕಾಣೆಯಾಗಿದೆ ಎಂಬ ಸುದ್ದಿ ರಾಜ್ಯದಾದ್ಯಂತ ಹರಿದಾಡುತ್ತಿದೆ ರಾಜ್ಯದ ಜನತೆ ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದಾರೆ.
ಈ ರೀತಿಯ ಗೊಂದಲಗಳಿಗೆ ತೆರೆ ಎಳೆಯ ಬೇಕೆಂದರೆ ಮಹಾರಾಣಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಕೋರಿದ್ದಾರೆ.