ಕಿಡ್ನಿ ವೈಫಲ್ಯ:ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯಿಂದ ಧನಸಹಾಯ

ಮೈಸೂರು, ಮಾ.8: ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆ ವತಿಯಿಂದ ದಿವ್ಯ ರವರ ಪತಿಯ ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ‌ ಧನಸಹಾಯ ಮಾಡಲಾಯಿತು.

ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯ ಸೇವಾ ಕಾರ್ಯದ ಅಂಗವಾಗಿ 10000 ರೂ ಗಳನ್ನು ನೀಡಲಾಯಿತು.

ಈ ವೇಳೆ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಸುಬ್ರಮಣ್ಯ, ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀಧರ್, ಸೆಕೆಂಡ್ ಸೆಂಚುರಿ ಅಂಬಾಸಿಡರ್ ಡಾ.ಅರ್.ಡೆ.ಕುಮಾರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಸಿ ಡಿ ಕೃಷ್ಣ, ಲಯನ್ ಪಿ ರಮೇಶ್ ,ಲಯನ್ ಪಿ. ಮಲ್ಲಿಕಾರ್ಜುನಪ್ಪ ಮತ್ತು ಲಯನ್ ಎಚ್.ಆರ್ ರವಿಚಂದ್ರ ಉಪಸ್ಥಿತರಿದ್ದರು.