ಮೈಸೂರು,ಮಾ.8: ಮಹಿಳೆಯರು ಈ ದೇಶದ ಬೆನ್ನೆಲುಬು,ಮಹಿಳೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮಪ್ರಸಾದ್ ತಿಳಿಸಿದರು.
ಜನಮನ ವೇದಿಕೆ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ರಾಮ ಪ್ರಸಾದ್ ನೇತೃತ್ವದಲ್ಲಿ ಚಾಮುಂಡಿಪುರಂನ ಉದ್ಯಾನವನವನ್ನು ಸ್ವಚ್ಛತೆಗೊಳಿಸಿ ಗಿಡ ನೆಟ್ಟು ನಂತರ ಮಹಿಳಾ ಪೌರಕಾರ್ಮಿಕರು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ವಿಶ್ವದ ಸಾಧಕರಲ್ಲಿ ನಾರಿಯರೇ ಮುಂಚೂಣಿಯಲ್ಲಿದ್ದಾರೆ
ಮಹಿಳೆ ನಿರಂತರ ಶ್ರಮ, ಶ್ರದ್ಧೆಯ ಫಲವಾಗಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಶೈಕ್ಷಣಿಕ ರಂಗದಲ್ಲಿ ಮುನ್ನಡೆದಿದ್ದಾಳೆ. ಹೇಳಿಕೊಳ್ಳಲಾಗದ ಸಮಸ್ಯೆಗಳ ನಡುವೆಯೂ ಯಶಸ್ಸಿನ ಹೆಜ್ಜೆ ಇರಿಸಿದ್ದಾಳೆ. ತನ್ನ ಅರಿವಿನ ಹಂದರ ಇನ್ನಷ್ಟು ವಿಸ್ತಾರಗೊಳಿಸಿದ್ದಾಳೆ ಎಂದು ಹೇಳಿದರು

ಬಿಜೆಪಿ ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ ರಾಜ ಅರಸ್, ವೈದ್ಯರಾದ ಲಕ್ಷ್ಮಿ, ನಗರ ಪಾಲಿಕೆ ಮಾಜಿ ಸದಸ್ಯರಾದ ವಿದ್ಯಾ ಅರಸ್, ಸುಮರಾಮ ಪ್ರಸಾದ್, ಮಂಜುನಾಥ್, ಸೋಮೇಶ್, ನಿರಂಜನ್, ಲಕ್ಷ್ಮಿನಾರಾಯಣ್, ಶಿವಪ್ರಸಾದ್, ಶಿವಣ್ಣ, ವೇಲು ,ಸಂತೋಷ್,ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.