ಕಾದಂಬರಿ ಸ್ಪರ್ಧೆ ವಿಜೇತರಿಗೆ ಮಾ.9ರಂದು ಸಾಹಿತ್ಯ ಮಿತ್ರಕೂಟ ಪ್ರಶಸ್ತಿ ಪ್ರದಾನ

Spread the love

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ,ಮಾ.7: ಸಾಹಿತ್ಯ ಮಿತ್ರಕೂಟ ಕೊಳ್ಳೇಗಾಲದ ವತಿಯಿಂದ ನಡೆದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯ ವಿಜೇತರಿಗೆ ಮಾ.9ರಂದು ಸಾಹಿತ್ಯ ಮಿತ್ರಕೂಟ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಮಾ. 9 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ

ಸಮಾರಂಭವನ್ನು ಖ್ಯಾತ ಸಾಹಿತಿಗಳು ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತ ನಾಯಕ್ ಉದ್ಘಾಟಿಸಲಿದ್ದಾರೆ.

ಕೊಳ್ಳೇಗಾಲದಲ್ಲಿ ಸಾಹಿತ್ಯ ಮಿತ್ರಕೂಟ ಸ್ಥಾಪನೆಯಾಗಿ ಐದಾರು ವರ್ಷ ಕಳೆದಿದ್ದು ಈ ಭಾಗದ ಜನಪದ ಸಾಹಿತ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಸದುದ್ದೇಶದಿಂದ ಸ್ಥಳೀಯ ಸಾಹಿತಿಗಳ ಪುಸ್ತಕ ಬಿಡುಗಡೆ ಮಾಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ.

ಉದಯೋನ್ಮುಖ ಬರಹಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಮಿತ್ರಕೂಟ ಶ್ರಮಿಸುತ್ತಿದೆ. ಹಾಗೆಯೇ ಸಾಹಿತ್ಯ ಮಿತ್ರಕೂಟದ ಪ್ರತಿ ಮೂರು ವರ್ಷಗಳ ಅಧ್ಯಕ್ಷರ ಅವಧಿಯಲ್ಲಿ ಒಮ್ಮೆ ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಪಾಠವಿದ್ದು
ದೊಡ್ಡ ಲಿಂಗಯ್ಯ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ರೂಪಿಸಲಾಗಿತ್ತು ಎಂದು
ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ.

ಅದೇ ರೀತಿ ಈ ಬಾರಿಯೂ ಸಾಹಿತ್ಯ ಮಿತ್ರ ಕೂಟವು 2024 25 ನೇ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿ ಮುಂದಿನ 2025 ರ ಜನವರಿ ತಿಂಗಳ ಎರಡನೇ ವಾರದಲ್ಲಿ ಕೊಳ್ಳೇಗಾಲ ಪಟ್ಟಣದ ಅರುಣಾಚಲೇಶ್ವರ ಸಭಾಂಗಣದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಿತ್ತು.

ಈ ಹಿನ್ನೆಲೆಯಲ್ಲಿ ಸಾಹಿತ್ಯ ಮಿತ್ರ ಕೂಟವು 2024 25 ನೇ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ 2022 ಹಾಗೂ 2023ನೇ ವರ್ಷಗಳಲ್ಲಿ ಪ್ರಕಟವಾಗಿರುವ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಆಹ್ವಾನಿಸಿತ್ತು.

2022 ಜನವರಿಯಿಂದ ಡಿಸೆಂಬರ್ 2023ನೇ ಜನವರಿಯಿಂದ ಡಿಸೆಂಬರ್ ವರ್ಷಗಳಲ್ಲಿ ಪ್ರಕಟವಾಗಿರುವ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಆಹ್ವಾನಿಸಿ. ಈ ಸ್ಪರ್ಧೆಯಲ್ಲಿ ಆಯ್ಕೆಗೊಂಡ 3 ಕಾದಂಬರಿ ಕೃತಿಗಳಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ ಹಾಗೂ ತೃತೀಯ ಬಹುಮಾನ 5 ಸಾವಿರ ರೂಗಳನ್ನು ಬಹುಮಾನವಾಗಿ ನೀಡುವುದರ ಜೊತೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾದಂಬರಿ ಕೃತಿಗಳನ್ನು ಸಾಹಿತ್ಯ ವಲಯದ ಪ್ರಾಜ್ಞರಿಂದ ಮೂರು
ಹಂತದಲ್ಲಿ ಓದಿಸಿ ಅಂತಿಮವಾಗಿ ಮೂರು ಕಾದಂಬರಿ ಕೃತಿಗಳನ್ನು ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ, ಬಂಗಿದೊಡ್ಡ ಮಂಜುನಾಥ ರವರ ‘”ಅರಳು ಮಲ್ಲಿಗೆ”’ ಕಾದಂಬರಿಗೆ ಪ್ರಥಮ ಸ್ಥಾನ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಬೆಳ್ಗೋಡು ಕಾರ್ತಿಕಾದಿತ್ಯ ರವರ “ಪ್ಯಾರಾಸೈಟ್” ಕಾದಂಬರಿಗೆ ದ್ವಿತೀಯ,

ಬೆಂಗಳೂರಿನ ಬಿ.ಎಂ. ಗಿರಿರಾಜ ರವರ “ಕತೆಗೆ ಸಾವಿಲ್ಲ”’ ಕಾದಂಬರಿ ತೃತೀಯ ಸ್ಥಾನ ಲಭಿಸಿದೆ.

ಅಂದು ನಡೆಯುವ ಸಮಾರಂಭದಲ್ಲಿ ಈ ಮೂರು ಕಾದಂಬರಿಗಳ ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿಯವರು ವಹಿಸಲಿದ್ದಾರೆ.

ಮೈಸೂರಿನ ಸಾಹಿತಿಗಳಾದ ಪ್ರೊ ಮೈಸೂರು ಕೃಷ್ಣಮೂರ್ತಿರವರು ಬಹುಮಾನ ಕೃತಿ ಕುರಿತು ಮಾತಾಡಲಿದ್ದಾರೆ. ಸಾಹಿತ್ಯ ಮಿತ್ರಕೂಟದ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ ಡಿ ದೊಡ್ಡ ಲಿಂಗೇಗೌಡ ಕಾರ್ಯದರ್ಶಿ ಸತೀಶ್. ಎಂ ಉಪಸ್ಥಿತರಿರುವರು ಎಂದು ಮದ್ದೂರು ದೊರೆಸ್ವಾಮಿ ಮಾಹಿತಿ ನೀಡಿದ್ದಾರೆ.