ಕೊಳ್ಳೇಗಾಲ,ಮಾ.5: ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಕ್ಯಾತೆ ತೆಗೆದು
ವ್ಯಕ್ತಿಯೊಬ್ಬನಿಗೆ ಗಾರೆ ಕೆಲಸದ ಮೇಸ್ತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿ ಮೂಲದ ಶಿವಣ್ಣ ಎಂಬುವರ ಮಗ ಪುನೀತ್ (55) ಕೊಲೆಯಾದ ದುರ್ದೇವಿ.
ಈತ ಹಲವಾರು ತಿಂಗಳುಗಳಿಂದ ಮ. ಮ ಬೆಟ್ಟ, ಮಳವಳ್ಳಿ ಈಗೆ ಸುತ್ತಮುತ್ತಲಿನ ಕಡೆ ಗಾರೆ ಕೆಲಸ ಮಾಡಿಕೊಂಡಿದ್ದ. ಈತನ ಮೇಲೆ ಪಟ್ಟಣದ ಗಾರೆ ಕೆಲಸದ ಮೇಸ್ತ್ರಿ ಮಂಜುನಾಥ್ @ ಮಣಿಕಂಠ @ಮಣಿ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದ.
ಕೂಡಲೇ ಆತನನ್ನು ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿ ಡಾ. ಲೋಕೇಶ್ವರಿ ಯವರು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸುಮಾರು 7 ಗಂಟೆಯಲ್ಲಿ ಪುನೀತ್ ಮೃತಪಟ್ಟಿದ್ದಾನೆ.
ಪುನೀತ್ ಗಾರೆ ಕೆಲಸ ಮಾಡಿಕೊಂಡು ಪಟ್ಟಣದ ಫೀಸ್ ಪಾರ್ಕ್ ಬಳಿಯ ಚೆನ್ನಮ್ಮ ಲಾಡ್ಜ್ ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಹಣಕಾಸಿನ ವಿಚಾರಕ್ಕೆ ಮೇಸ್ತ್ರಿಗೂ ಈತನಿಗೂ ಗಲಾಟೆಯಾಗಿದೆ ಈ ವೇಳೆ ಮೇಸ್ತ್ರಿ ಮಣಿ ಪುನೀತ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಸಂಬಂಧ ಲಾಡ್ಜ್ ಮ್ಯಾನೆಜರ್ ಪುಟ್ಟರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತ ವ್ಯಕ್ತಿಯು ಪುನೀತ್ ಬಿನ್ ಶಿವಣ್ಣ 55 ವರ್ಷ ಉತ್ತರಹಳ್ಳಿ ಬೆಂಗಳೂರು ಎಂದು ವಿಳಾಸ ತಿಳಿಸಿ ಮೃತಪಟ್ಟಿದ್ದಾನೆ ಇವರ ವಾರಸುದಾರರು ಅಥವಾ ಸಂಬಂಧಿಕರ ವಿಳಾಸ ಪತ್ತೆ ಆಗಿಲ್ಲ. ಇವರ ವಿಳಾಸ ಮಾಹಿತಿಯನ್ನು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಕೆಳಗೆ ಕೊಟ್ಟಿರುವ ನಂಬರ್ ಗಳಿಗೆ ಕರೆ ಮಾಡಿ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
ದೂರವಾಣಿ ಸಂಖ್ಯೆ -08224 252368,
-9480804653, 8310954515