ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಲನಚಿತ್ರ ನಟಿ ರನ್ಯಾ ರಾವ್ ರನ್ನು ಬಂಧಿಸಲಾಗಿದೆ.
ವಿದೇಶದಿಂದ 14.8 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಡಿ ಆರ್ ಐ ಅಧಿಕಾರಿಗಳು ರನ್ಯಾರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಐಪಿಎಸ್ ಅಧಿಕಾರಿ ಪುತ್ರಿ ಹಾಗೂ ನಟಿ ರನ್ಯಾ ಕನ್ನಡ ಚಲನಚಿತ್ರ ಮಾಣಿಕ್ಯದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.