ಮಾ.6 ರಂದು ಬಳ್ಳಾರಿಯ ಹಿರಿಯ ನಾಗರಿಕರಿಗೆ ಡಿಜಿಟಲ್ ಮೀಡಿಯಾ ಮಹತ್ವದ ಬಗ್ಗೆ ಅರಿವು

Spread the love

ಬಳ್ಳಾರಿ,ಮಾ.3: ಕರ್ನಾಟಕ ರಾಜ್ಯ ಡಿಜಿಟಲ್ ಮೀಡಿಯಾ ವತಿಯಿಂದ ಬಳ್ಳಾರಿಯ ಹಿರಿಯ ನಾಗರಿಕರಿಗೆ ಡಿಜಿಟಲ್ ಮೀಡಿಯಾ ಮಹತ್ವದ ಬಗ್ಗೆ ಅರಿವು ಮತ್ತು ಸಾಧಕ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾ.6 ರಂದು ಹಮ್ಮಿಕೊಳ್ಳಲಾಗಿದೆ.

ಬಳ್ಳಾರಿಯ ಮೋತಿ ಸರ್ಕಲ್‌ ಬಳಿ
ಹೋಟೆಲ್ ಮಾಡ್ರನ್ ಗ್ರಾಂಡ್ ಇನ್ ನಲ್ಲಿ ಅಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆ ಚಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜಾನಪದ ಹಿರಿಯ ಗಾಯಕರಾದ ಶ್ರೀ ದಡವಾಯಿ ಚಿತ್ತಪ್ಪ ಮತ್ತು ರೈತ ಮುಖಂಡರಾದ ಡೋಂಗಿ ಹನುಮಪ್ಪ, ಬಳ್ಳಾರಿಯ ಸ್ಮೈಲ್ ಫೌಂಡೇಶನ್ ಮುಖ್ಯಸ್ಥರಾದ ಉಮಾಪತಿ ಗೌಡ, ಶ್ರೀರಕ್ಷೆ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಸಂಡೂರು ಸಂಸ್ಥಾಪಕರಾದ ಡಾ. ಜಿ ವಿ ಲಕ್ಷ್ಮೀದೇವಿ,ಜನಪರ ಹೋರಾಟಗಾರರು ಕೆ.ಎಂ ಮಹೇಶ್ವರ ಸ್ವಾಮಿ‌ ಸೇರಿದಂತೆ ಹಲವು ಸಾಧಕ ಗಣ್ಯರನ್ನು ಅಭಿನಂದಿಸಲಾಗುವುದು.

ಸಮಾರಂಭದಲ್ಲಿ ಬಳ್ಳಾರಿಯ ಕೆಎಸ್‌ಡಿಎಂಎ ಅಧ್ಯಕ್ಷರಾದ ಸಿ ಬಸವರಾಜು ನಿರ್ದೇಶಕರಾದ ದೇವರಾಜು ಮತ್ತು ರಕ್ತದಾನಿ ಮಂಜು ಮತ್ತಿತರರು ಭಾಗವಹಿಸಲಿದ್ದಾರೆ.