ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನ ವಿತರಣೆ

Spread the love

ಮೈಸೂರು: ಕೇಶವ ಕೃಪಾ ಸಂವರ್ಧನ ಸಮಿತಿಯು ಅಭ್ಯುದಯದ ಮೂಲಕ ಮೈಸೂರಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಪ್ರೋತ್ಸಾಹಿಸಿತು.

ಬಿಎ, ಬಿಎಸ್ಸಿ ಡಿಪ್ಲೊಮಾ, ಐಟಿಐ ಬಿಇ ಮುಂತಾದ ವಿವಿಧ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಓದುತ್ತಿದ್ದು
ಅಭ್ಯುದಯವು ಎಲ್ಲಾ ಮಕ್ಕಳಿಗೂ ಉಜ್ವಲ ಭವಿಷ್ಯವನ್ನು ಹಾರೈಸಿತು.

ಪ್ರತಿ ವರ್ಷ ಅಭ್ಯುದಯವು ಕರ್ನಾಟಕದಾದ್ಯಂತ 300 ಮತ್ತು ಮೈಸೂರಿನಾದ್ಯಂತ 30 ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ಒದಗಿಸುತ್ತಿದೆ.

ಅಭ್ಯುದಯ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ , ಸೇವಾ ಭಾರತಿಯಿಂದ ಡಾ ಚಂದ್ರಶೇಖರ್, ಸಕ್ಷಮದಿಂದ ಜಯರಾಮ್, ಪ್ರಮುಖ ಶಿಕ್ಷಕ ಗೋಕುಲ್, ಕೆ.ಎನ್ ಕೃಷ್ಣ ಪ್ರಸಾದ್, ವಾಮನ್, ಸೀತಾರಾಮ್, ಮಣಿವಣ್ಣನ್, ವನವಾಸಿ ಕಲ್ಯಾಣದಿಂದ ಭರತ್, ನವೀನ್ ಕುಂಬಾರ ಕೊಪ್ಪಲು, ಅನಿತಾ, ಆದಿ ನಾರಾಯಣ ಮಂಡ್ಯ, ಅನುರಾಧ ಮಾಜಿ ವೈದ್ಯ, ಆಶಾ ಲತಾ, ರಮಾಮಣಿ, ರಾಹುಲ್, ನಾಗರಾಜ ರಾವ್ ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಿದರು.

ಇದೇ ವೇಳೆ ಅಭ್ಯುದಯ 20 ವರ್ಷಗಳು ಮತ್ತು ಕೇಶವ ಕೃಪಾ ಸಂವರ್ಧನ ಸಮಿತಿಯು 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಭ್ಯುದಯದ ಸ್ವಯಂಸೇವಕರಿಗೆ ಫಲಕಗಳನ್ನು ನೀಡಲಾಯಿತು.

ಮೈಸೂರು ಅಭ್ಯುದಯ ಯೋಜನೆಯ ಸಮನ್ವಯ ಮನೀಶ್ ಮತ್ತು ಸುಮತಿ ಉಪಸ್ಥಿತರಿದ್ದರು.

ಮೈಸೂರು, ಮಂಡ್ಯ, ಚಾಮರಾಜನಗರದಿಂದ ಆಗಮಿಸಿದ್ದ ಅಭ್ಯುದಯ ಉಚಿತ ಕಲಿಕಾ ಕೇಂದ್ರದ ಸ್ವಯಂ ಸೇವಕ ಶಿಕ್ಷಕರಿಗೆ ಅಭ್ಯುದಯ ಕಾರ್ಯಕಾರಿ ತಂಡದ ವೇಣುಗೋಪಾಲ್ ಅವರು ಅಭ್ಯುದಯ ಕುರಿತು ರಸಪ್ರಶ್ನೆ ನಡೆಸಿದರು.
ಹರ್ಷ ಹಾಜರಿದ್ದರು.