ಭೋಪಾಲ್,ಮಾ.2: ಮಧ್ಯ ಪ್ರದೇಶ ರಾಜ್ಯದ ಭೋಪಾಲ್ ನಲ್ಲಿ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಅವರನ್ನು ವಿವಿಧೆಡೆ ಅಭಿನಂದಿಸಿ ಗೌರವಿಸಲಾಯಿತು.
ಭೋಪಾಲ್ ನಗರದ ಸಮಾಜ ಸೇವಾ ಭವನದಲ್ಲಿ ಮೊದಲಿಗೆ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಪತ್ರಕರ್ತ ಜಿತೇಂದ್ರ ಸೋಲಂಕಿ, ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಮಹಿ ಪಲ್ ಸಿಂಗ್, ಜನಪದ ಕಾಲಾವಿದ ಮಧುಸೂದನ್, ಶಿವು, ಜಿತೇಶ್ ಮತ್ತಿತರರು ಹಾಜರಿದ್ದರು.

ನಂತರ ಇದೇ ದಿನ ಮಧ್ಯಪ್ರದೇಶ ಭೋಪಾಲ್ ನಲ್ಲಿ ಆತ್ಮೀಯ ಮಿತ್ರರಾದ ಸಿಹೊರ್ ಜಿಲ್ಲೆಯ ರಾಕೇಶ್ ಶರ್ಮ ಅವರು ಕೂಡಾ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಅಭಿನಂದಿಸಿ ಗೌರವಿಸಿದರು ಈ ವೇಳೆ ವಿನೋದ್ ಸೋನಿ, ವಿಶಾಲ್ ಪಟೇದರ್ ಮತ್ತಿತರರು ಹಾಜರಿದ್ದರು.
