ಮೈಸೂರು, ಮಾ. 2: ವ್ಯಕ್ತಿಯೊಬ್ಬ
ರಿವ್ಯೂಸ್ ಟಾಸ್ಕ್ ಕಂಪ್ಲೀಟ್ ಮಾಡಿದರೆ ಲಾಭ ನೀಡುವುದಾಗಿ ಹೇಳಿದ್ದನ್ನು ನಂಬಿ ಟೆಕ್ಕಿಯೊಬ್ಬರು 11.10 ಲಕ್ಷ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ವಂಚಕನ ವಿರುದ್ದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ವಿಜಯನಗರ ಬಡಾವಣೆ 2ನೇ ಹಂತದ ನಿವಾಸಿ ವೃತ್ತಿಯಲ್ಲಿ ಇಂಜಿನಿಯರ್ ಸಂದೀಪ್ ಗ್ರಾಂಧಿ ವಂಚನೆಗೆ ಒಳಗಾದ ಟೆಕ್ಕಿ.
ಪ್ರಾರಂಭದಲ್ಲಿ ಸ್ಥಳಗಳ ಬಗ್ಗೆ ರಿವ್ಯೂಸ್ ಹಾಕುವ ಟಾಸ್ಕ್ ಕಂಪ್ಲೀಟ್ ಮಾಡಿದರೆ ಕಮೀಷನ್ ನೀಡುವುದಾಗಿ ವ್ಯಕ್ತಿ ನಂಬಿಸಿದ್ದಾನೆ.
ಗೂಗಲ್ ನಲ್ಲಿ ಮೂರು ಸ್ಥಳಗಳಿಗೆ ರಿವ್ಯೂಸ್ ಹಾಕಿದಾಗ 150 ರೂ. ಕಮೀಷನ್ ಬಂದಿದೆ.
ನಂತರ 2000 ಇನ್ವೆಸ್ಟ್ ಮಾಡಿದಾಗ 2800 ರೂ ಬಂದಿದೆ.ನಂತರ 7000 ಇನ್ವೆಸ್ಟ್ ಮಾಡಿದಾಗ 9300 ರೂ. ಬಂದಿದೆ.
ಹೀಗೆ ಕಮಿಷನ್ ಬಂದಿದ್ದನ್ನು ನಂಬಿದ ಸಂದೀಪ್ ನಂತರ ಹಂತಹಂತವಾಗಿ 11.10 ಲಕ್ಷ ಇನ್ವೆಸ್ಟ್ ಮಾಡಿದ್ದಾರೆ. ಆದರೆ ಯಾವುದೇ ಕಮೀಷನ್ ಆಗಲಿ ಲಾಭವಾಗಲಿ ನೀಡದೆ ವ್ಯಕ್ತಿ ವಂಚಿಸಿದ್ದಾನೆ
ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.