ಮೈಸೂರು: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕುಡಿಯುವ ನೀರಿನ ಶುದ್ದೀಕರಣ ಘಟಕಗಳನ್ನು ಹಸ್ತಾಂತರಿಸಲಾಯಿತು.
ಬ್ಯಾಂಕಿನ ಸಾಮಾಜಿಕ ಜವಾಬ್ದಾರಿ ಚಟುವಟಿಕೆ ಅಡಿಯಲ್ಲಿ ಇವುಗಳನ್ನು ಹಸ್ತಾಂತರಿಸಲಾಯಿತು.
ಮೈಸೂರು ಇಂಜಿನಿಯರಿಂಗ್ ಕಾಲೇಜು ಹಾಗೂ ಮಾನಸ ಗಂಗೋತ್ರಿ ಗ್ರಂಥಾಲಯಕ್ಕೆ ಮತ್ತು ಸ್ನಾತಕೋತ್ತರ ಪದವಿ ಹುಡುಗರ ಹಾಸ್ಟೆಲ್‌ಗಳಿಗೆ ಒಟ್ಟು ಮೂರು ನೀರು ಸುದ್ದಿಕರಣ ಘಟಕಗಳನ್ನು ಅಳವಡಿಸಲಾಯಿತು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಲೋಕನಾಥ್ ಎನ್ ಕೆ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ಮೈಸೂರು ವಲಯ ಕಛೇರಿಯ ಉಪ ಮಹಾ ಪ್ರಬಂಧಕರಾದ ಅರುಣ್ ಕುಮಾರ್ ಪಾಣಿಗ್ರಹಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಪಿ ವಿ ಎಸ್ ರಂಗನಾಥ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಎಮ್ ಎಸ್ ಗೋವಿಂದ ಗೌಡ ಮತ್ತು ರೇಖಾ ಕೆ ಎಸ್ ಹಣಕಾಸು ಅಧಿಕಾರಿ ಮತ್ತು ಎಸ್ ಬಿ ಐ ನ ಮುಖ್ಯ ವ್ಯವಸ್ಥಾಪಕರಾದ ಸುಧಾ ಕೋಟೇಶ್ವರ, ನೇತ್ರಾವತಿ ಮತ್ತಿತರರು ಹಾಜರಿದ್ದರು.