ವಸ್ತು ಪ್ರದರ್ಶನ ಆವರಣದ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ

Spread the love

ಮೈಸೂರು: ಶ್ರಾವಣ ಶನಿವಾರ ಪ್ರಯುಕ್ತ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಏರಗಪಡಿಸಲಾಗಿತ್ತು

ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು, ಅವಧೂತ ಅರ್ಜುನ ಗುರೂಜಿ ಮತ್ತು ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಅವರು‌ ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಿದರು.

ಈ‌‌ ವೇಳೆ ಅವಧೂತ ಅರ್ಜುನ ಗುರೂಜಿ ಅವರು ಮಾತನಾಡಿ ವೀಣೆ ಕುಪ್ಪಣ ಅವರ ಸುಪುತ್ರ ವೀಣೆ ವೆಂಕಟಕೃಷ್ಣ ಸುಬ್ಬಯ್ಯ ಮೈಸೂರು ಸಂಸ್ಥಾನದಲ್ಲಿ ಸಂಗೀತ ಆಸ್ಥಾನ ಪಂಡಿತರಾಗಿದ್ದರು ಅವರ ನಿಧನದ ಬಳಿಕ 1840ರಲ್ಲಿ ಅವರ ಧರ್ಮಪತ್ನಿ ವೀಣೆ ವೆಂಕಮ್ಮ ಅವರು ಶ್ರೀ ಸಾಂಬಸದಾಶಿವ ದೇವಾಲಯ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇವಾಲಯವನ್ನ ದೊಡ್ಡಕೆರೆ ದಡದಲ್ಲಿ ನಿರ್ಮಿಸಿದರು ಎಂದು ಮಾಹಿತಿ ನೀಡಿದರು.

ಈ ಪುಣ್ಯಸನ್ನಿಧಿಯಲ್ಲಿ ನೂರಾರು ವರುಷಗಳು ಸಾವಿರಾರು ಮದುವೆಗಳು, ನಾಮಕರಣದಂತಹ ಶುಭಸಮಾರಂಭಗಳು ಜರುಗಿದೆ, ಪಕ್ಕದಲ್ಲಿ ಕುಸ್ತಿ ಅಖಾಡ ಅಭ್ಯಾಸ ಮಾಡುತ್ತಿದ್ದ ಪೈಲ್ವಾನರು ಪ್ರತಿದಿನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಬಡಜನರಿಗೆ ಅನೂಕೂಲವಾಗುವಂತೆ ಆಚರಣೆಗಳು ಕಾರ್ಯಕ್ರಮಗಳಿಗೆ ಈ ಜಗವನ್ನು ನೀಡಿದರೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್ ಕುಮಾರ್, ವಿನಯ್ ಕಣಗಾಲ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಿ.ಎಸ್ ರಘು, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಜಿ.ರಾಘವೇಂದ್ರ, ರಂಗಸ್ವಾಮಿ ಪಾಪು, ಗುರುರಾಜ್, ರಂಗನಾಥ್, ನವೀನ್, ಭರತ್ ಮತ್ತಿತರರು ಹಾಜರಿದ್ದರು.