ಮೈಸೂರು,ಸೆ.1:ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಭಾರ ಹೊರುವ ತಾಲೀಮು ಭಾನುವಾರದಿಂದ ಆರಂಭಿಸಲಾಯಿತು.
ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ದಿನ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಐದು ಕಿಲೋಮೀಟರ್ ದೂರ ಸಾಗಲಿದ್ದಾನೆ.

ಹಾಗಾಗಿ ಅಭಿಮನ್ಯು ಸೇರಿದಂತೆ ಇತರ ಆನೆಗಳಿಗೂ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸ ಲಾಯಿತು.
ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ ನಲ್ಲಿ ಬೆಳಿಗ್ಗೆ 7.30ಕ್ಕೆ ಪೂಜೆ ಸಲ್ಲಿಸಿ ಆನಂತರ ಅಭಿಮನ್ಯು ಮೇಲೆ 600 ಕೆಜಿ ತೂಕದ ಮರಳಿನ ಮೂಟೆಯನ್ನು ಹೊರಿಸಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.