ಬೆಳಗಾವಿ: ಮನೆಯಲ್ಲಿ ಯಾರು ಯಾವ ಭಾಷೆಯನ್ನಾದರೂ ಮಾತನಾಡಲಿ,ಆದರೆ ವಾಸಿಸುತ್ತಿರುವುದು ಕರ್ನಾಟಕದಲ್ಲಿ ಹಾಗಾಗಿ ವ್ಯವಹರಿಸಬೇಕಾದರೆ ಕನ್ನಡ ಭಾಷೆಯನ್ನೇ ಬಳಸಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಹೇಳಿದರು.
ಕೆಎಸ್ಸಾರ್ಟಿಸಿ ಬಸ್ ನಲ್ಲಕ ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಬಸ್ ನಿರ್ವಾಹಕನನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಉಮಾಶ್ರೀ ಮಾತಾಡಿದರು.
ಕನ್ನಡಿಗರಿಗೆ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ ಇರುವಂತೆಯೇ ಮರಾಠಿ ಭಾಷಿಕರಿಗೂ ತಮ್ಮ ಮಾತೃಭಾಷೆಯ ಮೇಲೆ ಪ್ರೀತಿ ಇರಬಹುದು, ಅದರೆ ಅವರು ವಾಸಮಾಡುತ್ತಿರುವುದು ಕರ್ನಾಟಕದಲ್ಲಿ ಮತ್ತು ಇಲ್ಲಿ ಕನ್ನಡವೇ ಆಡಳಿತ ಭಾಷೆ ಅನ್ನೋದನ್ನು ಮರೆಯಬಾರದು ಎಂದು ಹೇಳಿದರು.
ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತಾಡಿ ಅಂತ ಕಂಡಕ್ಟರ್ ಹೇಳಿರುವುದು ಸರಿಯಾಗಿಯೇ ಇದೆ, ಅವರೊಬ್ಬ ಸರ್ಕಾರೀ ನೌಕರ, ಹಲ್ಲೆಕೋರರು ಮನೆಯಲ್ಲಿ ಯಾವ ಭಾಷೆಯನ್ನಾದರೂ ಮಾತಾಡಿಕೊಳ್ಳಲಿ, ಅದರೆ ಹೊರಗಡೆ ಬಂದಾಗ ಅವರು ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಉಮಾಶ್ರೀ ಸೂಚ್ಯವಾಗಿ ಹೇಳಿದರು.
ಈ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ,ಕಠೋರವಾಗಿ ಖಂಡಿಸುತ್ತೇನೆ ಮತ್ತು ತಪ್ಪಿತಸ್ಥರಿಗೆ ತಮ್ಮ ಸರ್ಕಾರ ಸೂಕ್ತ ಶಿಕ್ಷೆ ನೀಡುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.