ಬೆಂಗಳೂರು: 16ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದ ವೇಳೆ ನಡೆದ
ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಒಡ್ಡಿಸ್ಸಾ ರಾಜ್ಯ ಪ್ರಥಮ ಸ್ಥಾನ ಪಡೆದಿದೆ.
ಭಾರತ ಸರ್ಕಾರದ ಗೃಹ ಮಂತ್ರಾಲಯ ಹಾಗೂ ಯುವ ಕಾರ್ಯ ಹಾಗೂ ಕ್ರೀಡಾ ಮಂತ್ರಾಲಯ, ನೆಹರು ಯುವ ಕೇಂದ್ರ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಯಲ್ಲಿ ಸುಮಾರು 15 ರಾಜ್ಯದ ತಂಡಗಳು ಭಾಗವಹಿಸಿದ್ದವು.

ಒಡ್ಡಿಸ್ಸಾ ರಾಜ್ಯ ಪ್ರಥಮ ಸ್ಥಾನ, ಛತ್ತಿಸ್ ಗಡ್ ರಾಜ್ಯ ಧ್ವತೀಯ ಸ್ಥಾನ, ಜಾರ್ಕಂಡ್ ರಾಜ್ಯ ತ್ರತೀಯ ಸ್ಥಾನ ಪಡೆದಿದ್ದಾರೆ.ಇದೇ ವೇಳೆ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಬಾಲಾಜಿ, ಡಾ.ಹನಿಯೂರು ಚಂದ್ರೆ ಗೌಡ, ಪ್ರೊ. ಅಂಬಿಕಾ ತೀರ್ಪುಗಾರರಾಗಿ ಭಾಗವಹಿಸಿದ್ದರು.

ಅಧಿಕಾರಿ ನಾಗಲಕ್ಷ್ಮಿ, ಹಾಗೂ
ಇತರ ರಾಜ್ಯದ ಎಸ್ಕಾರ್ಟ್ ಹಾಗೂ 250 ಕಿಂತ ಹೆಚ್ಚು ಬುಡಕಟ್ಟು ಕಾರ್ಯಕ್ರಮದ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.