ಶ್ರೀರಾಮ ಗೆಳೆಯರ ಬಳಗದಿಂದಮನೆಮನೆಗೆ ಗಂಗಜಾಲ ಅಭಿಯಾನ

Spread the love

ಮೈಸೂರು: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಚಾಮುಂಡಿಪುರಂ ವಾರ್ಡ್ ನಂ 55ರ ವ್ಯಾಪ್ತಿಯಲ್ಲಿ ‘ಮನೆಮನೆಗೆ ಗಂಗಜಾಲ’ ವಿತರಣೆ ಅಭಯಾನ ಹಮ್ಮಿಕೊಳ್ಳಲಾಯಿತು.

ಅಭಿಯಾನಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಂದೀಪ್ ಚಂದ್ರಶೇಖರ್ ನಮ್ಮ ವಾರ್ಡ್ ಜನರಿಗೆ ಹಿಂದೂಗಳ ಪುಣ್ಯ ಕ್ಷೇತ್ರವಾದ ಪ್ರಯಾಗ್ ರಾಜ್ ನಲ್ಲಿನ
ಈ ಬಾರಿಯ 144 ನೇ ಮಹಾಕುಂಭ ಮೇಳದಲ್ಲಿ ಮೂರು ನದಿಗಳಾದ ಗಂಗಾ ,ಯಮುನಾ , ಸರಸ್ವತಿಯ ತ್ರಿವೇಣಿ ಸಂಗಮದ ಪವಿತ್ರ ಗಂಗಾ ಜಲವನ್ನು ಹಾಗೂ ಶಿವರಾತ್ರಿ ಹಬ್ಬದ ಶುಭಾಶಯದ ಜತೆಗೆ ಶಿವನ ಆರಾಧನೆಯಲ್ಲಿ ಪಠಿಸುವ 108 ಶಿವ ಸ್ತೋತ್ರಗಳ ಒಳಗೊಂಡ ಕರಪತ್ರವನ್ನು ಮನೆ ಮನೆಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ಪವಿತ್ರ ಗಂಗಾ ಜಲದ ಮುಖೇನ ದೇಶದ ಸಾಮರಸ್ಯ ಹಾಗೂ ಹಿಂದೂ ಪರಂಪರಾ ಧಾರ್ಮಿಕ ನಂಬಿಕೆಯನ್ನು ಎತ್ತಿಹಿಡಿಯವ ಮೂಲಕ ದೇಹ ಶುದ್ದಿ ,ಮನಃ ಶುದ್ದಿ ಮಾಡಿಕೊಳ್ಳಬೇಕೆಂದು ವಿನಂತಿಸಿದರು.

ಪ್ರತಾಪ್ ಸಿಂಹ ಅವರು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಈ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮ ಬೆಳೆವಣಿಗೆ‌ಹಾಗೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಅಭಿಯಾನದಲ್ಲಿ ಚಂದ್ರಶೇಖರ್ ಮುಖಂಡರಾದ ವಿದ್ಯಾ ಅರಸ್, ಮಂಜುಳಾ, ಕಾವೇರಿ , ಪಾರ್ವತಿ, ಲತಾ, ಕಾವ್ಯ, ಧರ್ಮೇಂದ್ರ, ರಮೇಶ್, ಬಸವರಾಜ್, ಪ್ರಭು, ಸುರೇಶ್, ಮುರಳಿ, ಗುರು, ಮಹೇಶ್ ಅರಸ್, ಮುದ್ದುಕೃಷ್ಣ, ಅಜಯ್ ಶಾಸ್ತ್ರಿ, ಕುಮಾರ್, ಕಿಶೋರ್, ವರುಣ್, ನಂದ ಕುಮಾರ್, ಚೇತನ್, ರಾಜೇಂದ್ರ, ಪುರುಷೋತ್ತಮ, ತೇಜಸ್, ಮಧುಸೂಧನ್, ವರುಣ್, ಭಾನು ಕುಮಾರ್ , ಕುಶಾಲ್, ಸಂತೋಷ್ ಮುಂತಾದವರು ಪಾಲ್ಗೊ‌ಂಡಿದ್ದರು.