ವಿದ್ಯಾವರ್ಧಕ ಸ್ಮಾರ್ಟ್ ಸ್ಕೂಲ್ ವಿದ್ಯೋತ್ಸವ ಶಾಲಾ ವಾರ್ಷಿಕೋತ್ಸವ

Spread the love

ಬೆಂಗಳೂರು: ಬೆಂಗಳೂರಿನ ವಿದ್ಯಾವರ್ಧಕ ಸ್ಮಾರ್ಟ್ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯೋತ್ಸವ ಶಾಲಾ ವಾರ್ಷಿಕೋತ್ಸವ ವಿಶೇಷವಾಗಿ ನಡೆಯಿತು.

ವಿದ್ಯೋತ್ಸವ ಶಾಲಾ ಮಕ್ಕಳ ವಾರ್ಷಿಕೋತ್ಸವ ಸಮಾರಂಭದ ವೇಳೆ ವಿವಿಧ ಶಾಲೆಗಳ ಮಾಲೀಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮಿಜಿ ಉದ್ಘಾಟಿಸಿದರು.

ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೂರೆಗೊಂಡವು.

ಮಾಚೋಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪವಿತ್ರಾ,ವಿದ್ಯಾವರ್ಧಕ ಸ್ಮಾರ್ಟ್ ಸ್ಕೂಲ್ ಅಧ್ಯಕ್ಷರಾದ ಗಿರೀಶ್, ಎಂ.ಟಿ,ಪ್ರಾಂಶುಪಾಲರಾದ ಸೌಮ್ಯ.ಎಸ್.ಆರ್ ಸೇರಿದಂತೆ ಇನ್ನಿತರೆ ಶಾಲೆಯ ಕಾರ್ಯದರ್ಶಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.