ಚಿತ್ರ ಮಂದಿರದಲ್ಲೇ ಭಗೀರಥ ಚಲನಚಿತ್ರ ವೀಕ್ಷಿಸಲು ಮನವಿ

Spread the love

ಮೈಸೂರು: ಸಮಾಜಕ್ಕೆ ಬೇಕಾದ ಪ್ರಬಲವಾದ ಸಂದೇಶಗಳನ್ನು ಹೊಂದಿರುವ ಕನ್ನಡ ಭಗೀರಥ ಚಲನಚಿತ್ರವನ್ನು ಎಲ್ಲರೂ ವೀಕ್ಷಿಸಬೇಕೆಂದು ಮೈಸೂರಿನ ವಕೀಲರ ಸಂಘದ ಕಾರ್ಯದರ್ಶಿ ಚರಣ್ ರಾಜ್ ಕರೆ ನೀಡಿದರು.

ನಾಡಿನ ಎಲ್ಲಾ ಜನರು
ಸಿನಿಮಾ ಮಂದಿರಗಳಲ್ಲೇ ಭಗೀರಥ ಚಿತ್ರ ನೋಡುವುದರ ಮೂಲಕ ಈ ಚಿತ್ರವನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮೈಸೂರಿನ ಹುಟ್ಟು ಹೋರಾಟಗಾರರು, ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಡೇರಿಂಗ್ ಸ್ಟಾರ್ ಎಸ್ ಜೈಪ್ರಕಾಶ್ ಅವರು ನಾಯಕ ನಟರಾಗಿ ನಟಿಸಿರುವ ಭಗೀರಥ ಚಲನಚಿತ್ರ ತಂಡ ಮೈಸೂರಿನ ವಕೀಲರ ಸಂಘಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರ ತಂಡಕ್ಕೆ ಶುಭ ಕೋರಿ ಅವರು ಮಾತನಾಡಿದರು.

ಮೈಸೂರು ವಕೀಲರ ಸಂಘದ ಉಪಾಧ್ಯಕ್ಷ, ಮಾಜಿ ಅಧ್ಯಕ್ಷರಾದ ಮಹದೇವ ಸ್ವಾಮಿ, ಮಾಜಿ ಕಾರ್ಯದರ್ಶಿ ಉಮೇಶ್, ಶೋಭಾ, ಸುನೀತ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ನಾಗರಾಜು, ನೇಹಾ, ಪ್ರೀತಿ ಸಿಂಗ್ ಈ ವೇಳೆ ಉಪಸ್ಥಿತರಿದ್ದರು.