ಯಶಸ್ವಿಯಾಗಿ ನಡೆದ ರಾಷ್ಟ್ರಮಟ್ಟದ ಕರೋಕೆ ಗಾಯನ

Spread the love

ಉಡುಪಿ: ಶ್ರೀ ನಂದಿಕೇಶ್ವರ ನಾಟಕ ಸಂಘ ಮಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ಕರೋಕೆ ಗಾಯನ ಯಶಸ್ವಿಯಾಗಿ ನೆರವೇರಿತು ‌

ಕರುನಾಡ ಸೇನಾನಿಗಳ ವೇದಿಕೆಯ ಅಂಗ ಸಂಸ್ಥೆಯಾದ ಒಂದು ಹೆಜ್ಜೆ ರಕ್ತದಾನಿ ಬಳಗ ಮೈಸೂರು, ಇದರ ಅಂಗ ಸಂಸ್ಥೆ ಉಡುಪಿ ಜಿಲ್ಲೆಯ ಪೋಸ್ಟರ್ ಅನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರುಮೆ ಸುರೇಶ್ ಶೆಟ್ಟಿ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ಜೋಸೆಫ್ ಲೊಬೋ ಶಂಕರಪುರ ನಟ ಹಾಗೂ ನಿರ್ದೇಶಕರಾದ ಸೋಮನಾಥ ಶೆಟ್ಟಿ,ಸಂಗೀತ ಕ್ಷೇತ್ರದಲ್ಲಿ ಮಿಂಚಿದ ಬಾಲ ಪ್ರತಿಭೆ ಆಯುಷ್ ಮೆನೇಜಸ್, ರಿಸೆಲ್ ಮೆಲ್ಬಾ ಕ್ರಸ್ಥಾ ಅವರುಗಳನ್ನು ಸನ್ಮಾನಿಸಲಾಯಿತು.

ಬಳಿಕ ರಾಷ್ಟ್ರಮಟ್ಟದ ಕರೋಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ರಕ್ತದಾನದ ಬಗ್ಗೆ ಒಂದು ಹೆಜ್ಜೆ ರಕ್ತದಾನಿ ಬಳಗ ಮೈಸೂರು ಇದರ ಸ್ಥಾಪಕ ಅಧ್ಯಕ್ಷ ರಕ್ತದಾನಿ ಮಂಜು ಮಾತನಾಡಿ, ಸತತ ನಾಲ್ಕು ವರ್ಷದಿಂದ ಒಂದು ಹೆಜ್ಜೆ ರಕ್ತದಾನ ಬಳಗವನ್ನು ಕಟ್ಟಿ ಮೈಸೂರು ಬೆಂಗಳೂರಿನಲ್ಲಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ರಕ್ತದಾನ ಮಾಡಿಸುತ್ತಾ ಜತೆಗೆ ನಾವು ಕೂಡ ರಕ್ತದಾನ ಮಾಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ರಕ್ತದಾನ ಮಾಡುವುದು ಕಡಿಮೆಯಾಗಿದೆ ಹಾಗಾಗಿ ಪ್ರತಿಯೊಬ್ಬ ಯುವಕ ಯುವತಿಯರು ಕೂಡ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ನೀಮಾ ಲೋಬೊ ಅವರಿಗೆ ಒಂದು ಹೆಜ್ಜೆ ರಕ್ತದಾನಿ ಬಳಗ ಉಡುಪಿ ಜಿಲ್ಲೆ ಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ರಕ್ತದಾನ ಮಾಡುವ ಮುಖಾಂತರ ಜವಾಬ್ದಾರಿಯನ್ನು ಕೊಡುತ್ತಿದ್ದೇವೆ ಎಂದು ತಿಳಿಸಿದರು.

ಅ ಜೊತೆ ಉಡುಪಿ ಜಿಲ್ಲೆಯ ಎಲ್ಲಾ ಯುವಕ ಯುವತಿಯರು ವಿದ್ಯಾರ್ಥಿಗಳು ಸೇರಿ ರಕ್ತದಾನ ಮಾಡುವ ಮೂಲಕ ಸೇವೆಯನ್ನು ಮಾಡಬೇಕೆಂದು ರಕ್ತದಾನಿ ಮಂಜು ಕೋರಿದರು.

ಇದೇ ವೇಳೆ ಉಡುಪಿ ಜಿಲ್ಲೆಯ ರಕ್ತದಾನಿ ಬಳಗದ ನೀಮ ಲೋಬೋ ಅವರು ಏಳು ಬಾರಿ ರಕ್ತದಾನ ಮಾಡಿರುವುದಕ್ಕೆ ಕರುನಾಡ ರಕ್ತ ಸೇನಾನಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗ ಉಡುಪಿ ಜಿಲ್ಲಾ ಅಧ್ಯಕ್ಷ ಪ್ರಸಾದ್ ರೈ, ನಟ ಹಾಗೂ ನಿರ್ದೇಶಕ ನಂದನ್ ಬೆಂಗಳೂರು, ಸ್ಯಾಂಡಲ್ ವುಡ್ ಫಿಲಂ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಆನಂದ್ ಕಲ್ಪತರು, ಉಡುಪಿ ಕರೋಕೆ ಮ್ಯೂಸಿಕಲ್ ಕ್ಲಬ್ ಸಂಸ್ಥಾಪಕ ಮದನ್ ಮಣಿಪಾಲ್, ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಸಂಸ್ಥಾಪಕ ಪ್ರಕಾಶ್ ಕಾಮತ್, ರಾಷ್ಟ್ರ ಹಾಗೂ ರಾಜ್ಯಮಟ್ಟದ ಗಾಯಕರಾಗಿರುವ ವಿಲ್ಫೆಡ್ ವಿಜಯ ಡೇಸ ಶಂಕರಪುರ, ಪತ್ರಕರ್ತ ಹಾಗೂ ಕಲಾವಿದರಾದ ಪ್ರಕಾಶ್ ಸುವರ್ಣ ಕಟ್ಪಾಡಿ,ಖ್ಯಾತ ಕಲಾವಿದ ನಾಗೇಶ್ ಕಾಮತ್ ಕಟ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಸಂಗೀತಗಾರರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.