ಮೈಸೂರು: ಎಚ್ ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ವತಿಯಿಂದ ಮಾಜಿ ಮಹಾಪೌರರು ಹಾಗೂ ಜೆಡಿಎಸ್ ಮುಖಂಡರಾದ ಎಮ್ ಜೆ. ರವಿಕುಮಾರ್ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭ ಕೋರಲಾಯಿತು.

ಎಚ್. ಡಿ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷರೂ ಜೆಡಿಎಸ್ ಮುಖಂಡರಾದ ಬೆಲ್ಲವತ್ತ ರಾಮಕೃಷ್ಣಗೌಡ ಹಾಗೂ ನಗರ ಅಧ್ಯಕ್ಷರು ಜೆಡಿಎಸ್ ಮುಖಂಡರಾದ ಕೆಆರ್ ಮಿಲ್ ಕಾಲೋನಿ ಆನಂದ್ ಗೌಡ, ನಗರ ಸಂಘಟನಾ ಕಾರ್ಯದರ್ಶಿ ಹಾಗೂ ಜೆಡಿಎಸ್ ಮುಖಂಡರಾದ ಮೇಧರ್ ಬ್ಲಾಕ್ ಕೋದಂಡರಾಮ ಮತ್ತಿತರರು ಶುಭ ಕೋರಿದರು.
ಎಮ್ ಜೆ. ರವಿಕುಮಾರ್ ಅವರ ನಿವಾಸಕ್ಕೆ ತೆರಳಿದ ಈ ಎಲ್ಲಾ ಮುಖಂಡರು ರವಿಕುಮಾರ್ ಮತ್ತು ಅವರ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭ ಹಾರೈಸಿದರು.ಈ ವೇಳೆ ಹಾರ ಹಾಕಿ ಫಲ ತಾಂಬೂಲ ನೀಡಿ ಅಭಿಮಾನ ಮೆರೆದರು.