ಹುಬ್ಬಳ್ಳಿ: ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ವಿಶ್ವ ವಿಜಯ ಪತ್ರಿಕೆಯ 20ನೇ ವಾರ್ಷಿಕೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ನಗರ ಬೈರಿ ದೇವರ ಕೊಪ್ಪಳ ಡಾ. ಬಿಆರ್ ಅಂಬೇಡ್ಕರ್ ಸಭಾಭವನದಲ್ಲಿ ವಿಶ್ವ ವಿಜಯ ಪತ್ರಿಕೆಯ 20ನೇ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು
ಪ್ರಶಸ್ತಿ ಪುರಸ್ಕೃತರಲ್ಲಿ ಕೃಷಿ ಸಾಧಕ ಜೋಸೆಫ್ ಲೋಬೋ ಶಂಕರಪುರ ಅವರು ಪ್ರಮುಖರು. ಅವರಿಗೆ ರೈತ ರತ್ನ ರಾಷ್ಟ್ರೀಯ ಪ್ರಶಸ್ತಿ 2025 ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅಂತರಾಷ್ಟ್ರೀಯ ಪಾಲಿಭಾಷಾ ತಜ್ಞರು ಶ್ರೀ ಪಬ್ಬಸ್ವರವಿತಿ ಪಾಲಿವಿಜ್ಞಾ ಮುನಿಯ ಅವರು ವಹಿಸಿದ್ದರು.
ಗಂಗಾವತಿ ಸಿಲ್ಕ್ ಪ್ಯಾಲೇಸ್ ನ ಆನಂದ್ ಬಸವರಾಜ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಕ.ರಾ.ನಿ.ನೌ ಸಂಘದ ಬಿ.ಎ ಪಾಟೀಲ್ ಹಾಗೂ ಪ್ರಗತಿಪರ ರೈತರು, ಉಪನ್ಯಾಸಕರು ಪತ್ರಿಕೆಯ ಪ್ರಧಾನ ಸಂಪಾದಕರು ಡಿ.ಎಂ.ಬುರಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.