ಮಂಡ್ಯ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಜಿ ಸಚಿವರೂ ಹಾಗು ಮಳವಳ್ಳಿಯ ಜನಪ್ರಿಯ ಶಾಸಕರಾದ ಪಿ ಎಂ ನರೇಂದ್ರಸ್ವಾಮಿ ಅವರಿಗೆ ವಿವಿಧ ಮುಖಂಡರು ಅಭಿನಂದಿಸಿದರು.
ಪಿ ಎಂ ನರೇಂದ್ರಸ್ವಾಮಿ ಅವರ ಸ್ವಗ್ರಾಮ ಪುರಿಗಾಲಿಯಲ್ಲಿ ಮುಖಂಡರು ಭೇಟಿ ಮಾಡಿ ಅಭಿನಂದಿಸಿದರು.
ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಂ ರಾಮು,ಮುಖಂಡರಾದ ಪಿ ಎಂ ಪರಶಿವಮೂರ್ತಿ,ಶ್ರೀಕಾಂತ್ ಚೆನ್ನಿಗ ಹಾಗೂ ಜೆ ಪಿ ಪ್ರವೀಣ್ ಅವರುಗಳು ನರೇಂದ್ರ ಸ್ವಾಮಿಯವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಹಾರ ಹಾಕಿ ಅಭಿನಂದಿಸಿ ಶುಭ ಕೋರಿದರು.