ಪ್ರಪಾತಕ್ಕೆ‌ ಬಸ್ ಉರುಳಿ ಐವರು ಸಾವು:20 ಮಂದಿ ಗಂಭೀರ

Spread the love

ಗುಜರಾತ್: ಪವಿತ್ರ ಕ್ಷೇತ್ರ ದ್ವಾರಕಾಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು ಐವರು ಮೃತಪಟ್ಟ ಘಟನೆ ಗುಜರಾತ್​ನ ಡಾಂಗ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದಿದೆ.

ಡಾಂಗ್ ಜಿಲ್ಲೆಯಲ್ಲಿ ಮುಂಜಾನೆ ಸಂಭವಿಸಿದ
ಅಪಘಾತದಲ್ಲಿ 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಿನ ಜಾವ 4.15ಕ್ಕೆ ಸಾಪುರತಾರಾ ಬೆಟ್ಟ ಪ್ರದೇಶದಲ್ಲಿ ಬಸ್ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬಿದ್ದಿದೆ.

ಬಸ್​ನಲ್ಲಿ 48 ಭಕ್ತರು ಪ್ರಯಾಣಿಸುತ್ತಿದ್ದರು ಎಂದು ಪ್ರಭಾರ ಪೊಲೀಸ್ ವರಿಷ್ಠಾಧಿಕಾರಿ ಎಸ್.​ಜಿ.ಪಾಟೀಲ್ ತಿಳಿಸಿದ್ದಾರೆ.

ಅಪಘಾತದಲ್ಲಿ ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಭಕ್ತರೆಲ್ಲ ಮಧ್ಯ ಪ್ರದೇಶ ಮೂಲದವರು ಎಂದು ಎಸ್.ಜಿ.ಪಾಟೀಲ್ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡವರನ್ನು ಅಹವಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ತ್ರಯಂಬಕೇಶ್ವರ ದಿಂದ ಗುಜರಾತ್​ನ ದ್ವಾರಕಾಗೆ ಖಾಸಗಿ ಬಸ್​ನಲ್ಲಿ 48 ಯಾತ್ರಿಕರು ತೆರಳುತ್ತಿದ್ದರು.