ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ಹೆಸರಿನಲ್ಲಿ ಹುಣಸೂರಿನ ಹೃದಯ ಭಾಗದಲ್ಲಿ ಅಂದರೆ ಹುಣಸೂರು ಬೈಪಾಸ್ ರಸ್ತೆಯಲ್ಲಿ ದೇವರಾಜ ಅರಸು ಭವನ ನಿರ್ಮಿಸಲಾಗಿದೆ.
ಸ್ಥಳೀಯರು ಸುತ್ತಮುತ್ತಲಿನ ಗ್ರಾಮಗಳು ಮತ್ತು ಇತರ ಸಾರ್ವಜನಿಕರಿಗೆ,ಬಡಜನರಿಗೆ ಅನುಕೂಲವಾಗಲಿ ಎಂದು ದೇವರಾಜ ಅರಸು ಭವನವನ್ನು ನಿರ್ಮಿಸಲಾಗಿದೆ.ಆದರೆ ಇದು ಸುಣ್ಣ,ಬಣ್ಣ ಕಾಣದೆ ಸೊರಗತೊಡಗಿದೆ.
ಅರಸು ಭವನ ನಿರ್ಮಾಣವಾಗಿ ಸುಮಾರು ಐದು ವರ್ಷಗಳು ಕಳೆದರೂ ಇನ್ನೂ ಇದಕ್ಕೆ ಉದ್ಘಾಟನೆಯ ಭಾಗ್ಯವೇ ಬಂದಿಲ್ಲ!ಇದು ನಿಜಕ್ಕೂ ದೇವರಸಜ ಅರಸು ಅವರಿಗೆ ಮಾಡುತ್ತುರುವ ಅಪಮಾನ.

ಸರ್ಕಾರ ಹಲವಾರು ಭಾಗ್ಯಗಳನ್ನು ಜನರಿಗೆ ಕರುಣಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ, ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸುವರು ಬಾಳಿ ಬದುಕಿದ ಪಟ್ಟಣ ಇದು.ಹುಣಸೂರಿನ ಮೇಲೆ ಅರಸು ಅವರಿಗೆ ಬಹಳ ಮಮಕಾರ ಇತ್ತು.ಅವರು ಬಡವರ ಬಂಧು ಎಂದೇ ಪ್ರಸಿದ್ದರು.
ಹಾಗಾಗಿ ಸರ್ಕಾರ ಅವರ ನೆನಪಿಗಾಗಿ ಈ ಭವನವನ್ನು ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ನಿರ್ಮಿಸಲಾಯಿತು. ಈ ಭವನ ನಿರ್ಮಾಣಕ್ಕೆ 5 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗುದ್ದಲಿ ಪೂಜೆ ನೆರವೇರಿಸಿದ್ದರು.

ಈಗಲೂ ಅವರೇ ಮುಖ್ಯಮಂತ್ರಿ ಆಗಿದ್ದಾರೆ ಈಗಲಾದರೂ ಈ ಭವನದ ಉದ್ಘಾಟನೆ ನೆರವೇರಿಸಿ ಹುಣಸೂರು ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಅನುಕೂಲ ಮಾಡಿಕೊಡಬಹುದಾಗಿತ್ತು. ಯಾಕೋ ಏನೋ ಗೊತ್ತಿಲ್ಲ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾ ಗುತ್ತಾ ಬರುತ್ತಿದ್ದರೂ ಈ ಭವನದ ಬಗ್ಗೆ ಯಾರಿಗೂ ಗಮನವೇ ಇಲ್ಲದಿರುವುದು ವಿಪರ್ಯಾಸ.
ಹಿಂದೆ ಮಂಜುನಾಥ್ ಅವರು ಶಾಸಕರಾಗಿದ್ದರು. ಅವರ ಕಾಲದಲ್ಲಿ ಈ ಭವನ ನಿರ್ಮಾಣವಾಗಿದೆ. ಈಗ ಜೆಡಿಎಸ್ ನ ಹರೀಶ್ ಗೌಡರು ಶಾಸಕರಾಗಿದ್ದಾರೆ. ಅವರಾದರೂ ಜನರ ಒಳಿತಿಗಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ದೇವರಾಜ ಅರಸು ಭವನವನ್ನು ಉದ್ಘಾಟನೆ ಮಾಡಿದರೆ ನಿಜಕ್ಕೂ ಒಳ್ಳೆಯದಾಗುತ್ತದೆ.
ಈ ದೇವರಾಜ ಅರಸು ಭವನ ನಿರ್ಮಾಣವಾಗಿ ಐದು ವರ್ಷಗಳಾಗಿರುವುದರಿಂದ ಆಗಲೇ ಅಲ್ಲಲ್ಲಿ ಕಿಟಗಿ ಬಾಗಿಲುಗಳು ಗೆಜ್ಜಲು ಹಿಡಿಯುವಂತಾಗಿದೆ.

ಸುಮಾರು ಎರಡರಿಂದ ಮೂರು ಎಕರೆ ಪ್ರದೇಶದಲ್ಲಿ ಈ ಭವನ ಇದೆ ಈಗ ಆವರಣದ ಸುತ್ತ ಕಳೆಗಳು, ಗಿಡಗಂಟಿಗಳು ಬೆಳೆದು ನಿಂತಿದೆ, ನಿರ್ವಹಣೆ ಇಲ್ಲದೆ ಹೋದರೆ ಇದು ಮುಂದೆ ಪಾಳು ಬೀಳುವುದು ಖಂಡಿತ.
ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಹೀಗೆ ಇಂತಹ ಒಂದು ಸುಂದರ ಭವನವನ್ನು ಹಾಳುಗೆಡವುವ ಮೊದಲೇ ಸರ್ಕಾರ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಸಚಿವರು ಎಚ್ಚೆತ್ತುಕೊಂಡು ತಕ್ಷಣವೇ ಇದಕ್ಕೆ ಉದ್ಘಾಟನೆ ಭಾಗವನ್ನು ಕೊಟ್ಟು ಜನರಿಗೆ ಬಿಟ್ಟು ಕೊಡಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದ್ದಾರೆ.

ಕೋಟ್ಯಂತರ ರೂ ವೆಚ್ಚ ಮಾಡಿ ನಿರ್ಮಿಸಿರುವ ಸುಂದರ ಕಟ್ಟಡ ಬಿದ್ದು ಹೋಗುವ ಬದಲು,ಸ್ಥಳೀಯರಿಗೆ ಸಣ್ಣಪುಟ್ಟ ಕಾರ್ಯಕ್ರಮಗಳು ಶುಭ ಸಮಾರಂಭಗಳು, ಸಂಘ ಸಂಸ್ಥೆಗಳ ಕಾರ್ಯಕ್ರಮಗಳನ್ನು ನಡೆಸಲು ಕಡಿಮೆ ಬೆಲೆಗೆ ಇದನ್ನು ಬಾಡಿಗೆಗೆ ಕೊಟ್ಟರೆ ಕಟ್ಟಡವೂ ಉಳಿಯುತ್ತದೆ, ಅಭಿವೃದ್ಧಿಯೂ ಆಗುತ್ತದೆ. ಸರ್ಕಾರಕ್ಕೂ ಆದಾಯ ಬರುತ್ತದೆ ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಯೋಚನೆ ಮಾಡಬೇಕೆಂದು ಅವರು ಕೋರಿದ್ದಾರೆ