ಎಚ್.ಡಿ.ಕೋಟೆ: ಇತ್ತೀಚೆಗಷ್ಟೇ ಹೆಚ್ ಡಿ ಕೋಟೆಯ ಜಮೀನಿನಲ್ಲಿ ಚಿರತೆ ಸೆರೆಯಾಗಿದ್ದರ ಬೆನ್ನಲ್ಲೇ ಮುಂಜಾನೆ ಮತ್ತೊಂದು ಚಿರತೆ ಸೆರೆಸಿಕ್ಕಿದ್ದು ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ಇದು ಸೇರಿ ಐದು ಚಿರತೆ ಸೆರೆಯಾದಂತಾಗಿದೆ.
ನಾಲ್ಕನೆ ಚಿರತೆ ಸೆರೆ ಸಿಕ್ಕಾಗಲೇ ರೈತರು ಇನ್ನೂ ಹೆಚ್ಚು ಚಿರತೆಗಳು ಇರನಹುದೆಂದು ಅನುಮಾನ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮತ್ತೆ ಬೋನು ಇಡುವಂತೆ ಒತ್ತಾಯಿಸಿದ್ದರು.
ಅವರ ಅನುಮಾನ ನಿಜವಾಗಿದೆ,
ಕಳೆದ ವಾರದ ಹಿಂದೆ ಚಿರತೆ ಸಿಕ್ಕಿದ ಸಮೀಪದಲ್ಲೇ ಇನ್ನೊಂದು ಗಂಡು ಚಿರತೆ ಸಿಕ್ಕಿಬಿದ್ದಿದೆ.
ಸಾಕು ಪ್ರಾಣಿಗಳನ್ನು ಕೊಂದು ಭೀತಿ ಸೃಷ್ಟಿಸಿದ್ದ 7ವರ್ಷದ ಗಂಡು ಚಿರತೆ ಬೋನಿನಲ್ಲಿ ಸೆರೆಯಾಗಿದೆ.
ಒಂದೇ ಜಮೀನಿನಲ್ಲಿ ಐದನೇ ಚಿರತೆ ಬೋನಿಗೆ ಸಿಕ್ಕಿರುವುದು ನೋಡಿ ಜನ ಅಚ್ವರಿಗೊಂಡಿದ್ದಾರೆ,ಜತೆಗೆ ಆತಂಕವೂ ಹೆಚ್ಚಾಗಿದೆ.
ಎಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಮಾಜಿ ಶಾಸಕ ದಿವಂಗತ ಎನ್.ನಾಗರಾಜು ಅವರ ಜಮೀನಿನಲ್ಲಿ ಹೀಗೆ ಒಂದರ ಹಿಂದೆ ಒಂದು ಚಿರತೆ ಸಿಕ್ಕಿಬಿದ್ದಿವೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೆರೆಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲು ಸಿಬ್ಬಂದಿ ನಿರ್ಧಾರಿಸಿದ್ದಾರೆ.ಇತ್ತ ಪಟ್ಟಣದ ಜನ ಚಿರತೆ ನೋಡಲು ಸೇರುತ್ತಲೇ ಇದ್ದಾರೆ.