ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ:ದೂರವಾಗದ ಚಿಂತೆ

ಹೆಚ್.ಡಿ.ಕೋಟೆ: ನಾಲ್ಕೈದು ದಿನಗಳ ಹಿಂದಷ್ಟೆ ಹೆಚ್.ಡಿ.ಕೋಟೆಯಲ್ಲಿ ಚಿರತೆ ಸೆರೆಯಾಗಿ ಜನ ನಿಟ್ಟುಸಿರು‌ ಬಿಡುವಾಗಲೇ ಮತ್ತೊಂದು‌ ಚಿರತೆ ಸೆರೆಸಿಕ್ಕಿದ್ದು ತೀವ್ರ ಆತಂಕಕ್ಕೆ ಎಡೆ ಮಾಡಿದೆ.

ಅದೂ ಒಂದೇ ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆಯಾಗಿದೆ.
ನಾಲ್ಕೈದು ದಿನಗಳ ಹಿಂದಷ್ಟೆ ಮೂರನೇ ಚಿರತೆ ಸೆರೆಯಾಗಿತ್ತು.ಇದೀಗ ಅದೇ ಸ್ಥಳದಲ್ಲೇ ಮತ್ತೊಂದು ಚಿರತೆ ಸೆರೆಯಾಗಿದೆ.

ಹೆಚ್.ಡಿ.ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಸಮೀಪದ ಗುರುಮಲ್ಲು ಅವರ ಜಮೀನಿನಲ್ಲಿ ಚಿರತೆ ಬೋನಿನಲ್ಲಿ ಸೆರೆಯಾಗಿದೆ.

‌ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ,ಆದರೆ ಜನರಲ್ಲಿ ಆತಂಕ ದೂರವಾಗಿಲ್ಲ.

ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆ ಬೋನು ಇರಿಸಿತ್ತು.ಅದೇ ಜಮೀನಿನಲ್ಲಿ ಇನ್ನೂ ಹಲವು ಚಿರತೆಗಳಿರಬಹುದೆಂದು ರೈತರು ಆತಂಕಪಟ್ಟಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯನ್ನು ಸಿಬ್ಬಂದಿ ಅರಣ್ಯಕ್ಕೆ ರವಾನಿಸಿದ್ದಾರೆ.