ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು

Spread the love

(ವರದಿ: ರಾಮಸಮುದ್ರ ಎಸ್‌.ವೀರಭದ್ರಸ್ವಾಮಿ)

ಚಾಮರಾಜನಗರ: ಮನಿಡಬ್ಲಿಂಗ್ ಪ್ರಕರಣದಲ್ಲಿ ತಿಂಗಳಾದರೂ ಸಿಗದೆ ಅಜ್ಞಾತ ವಾಸದಲ್ಲಿ ನಾಲ್ವರು ಪೊಲೀಸರಿದ್ದು ಅವರನ್ನು ಹುಡುಕಲಾಗದೆ ಪೊಲೀಸರು ತಟಸ್ಥರಾದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಮನಿ ಡಬ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಒಬ್ಬರು ಎಸ್‌ಐ ಹಾಗೂ ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧವೇ ಪ್ರಕರಣ ದಾಖಲಾಗಿ, ಎಸ್ಪಿ ಬಿಟಿ ಕವಿತಾ ಅವರು ಅಮಾನತು ಮಾಡಿದ್ದಾರೆ.

ಆದರೆ ಆ ನಾಲ್ವರು ಪೊಲೀಸರು ಬಂಧನದ ಭೀತಿಯಿಂದಾಗಿ ಕಳೆದ ಜು.27ರಿಂದಲೂ ನಾಪತ್ತೆಯಾಗಿಬಿಟ್ಟಿದ್ದಾರೆ.

ಆ ಪೊಲೀಸರನ್ನು ಪತ್ತೆ ಹಚ್ಚಲು ಪೊಲೀಸ್‌ ಇಲಾಖೆಗೆ ಸಾಧ್ಯವಾಗಿಲ್ಲ. ಆ ನಾಲ್ವರೂ ಸಹ ತಮ್ಮ ವಕೀಲರ ಮೂಲಕ ನಗರದ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕಿಸಿದ್ದರು. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ ಹಾಗಾಗಿ ಬಂಧನ ಬೀತಿಯಲ್ಲಿದ್ದು ಗೌಪ್ಯವಾಗಿದ್ದುಕೊಂಡೇ ಈಗ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ‌

ತಮಿಳುನಾಡಿನ ವ್ಯಕ್ತಿಯೊಬ್ಬರಿಗೆ ಹಣ ದುಪ್ಪಟ್ಟು ಮಾಡಿಕೊಡುವ ದಂಧೆಯಲ್ಲಿ ನಾಲ್ವರು ಪೊಲೀಸರು ಶಾಮೀಲಾಗಿದ್ದರು ಎಂಬ ಆರೋಪವುದೆ. ಇದು ವಂಚನೆ ಪ್ರಕರಣವಾದ್ದರಿಂದ ಆ ನಾಲ್ವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಮಹಾಲಕ್ಷ್ಮಿ ಹಬ್ಬ, ಸ್ವಾತಂತ್ರ್ಯ ದಿನಾಚರಣೆ , ಇದೀಗ ಗೌರಿಗಣೇಶ ಮೂರು ಹಬ್ಬದಲ್ಲೂ ಇಲಾಖೆ ಹಾಗೂ ಕುಟುಂಬದವರೊಂದಿಗೆ ಕಾಲ ಕಳೆಯಬೇಕಾಗಿದ್ದ ನಾಲ್ವರು ಸಿಬ್ಬಂದಿಗೆ ಗೌಪ್ಯ ಸ್ಥಳವೆ ಗತಿಯಾಗಿದೆ.

ಇವರನ್ನ ಹುಡುಕಲು ಎಎಸ್ಪಿ ಶಶಿದರ್ ಅವರು ನಾಲ್ಕು ತಂಡ ರಚಿಸಿದ್ದರೂ, ಕೆಲ ತಾಂತ್ರಿಕ ಪರಿಣತರು ಹಾಗೂ ಸಿಎಮ್ ಪದಕ ಪಡೆದ ಇನ್ಸ್ ಪೆಕ್ಟರ್ ಗಳಿದ್ದರೂ ಹುಡುಕಲಾಗದೆ ಇರೋದನ್ನ ನೋಡಿದರೆ ಇಲಾಖೆಯ ಮೇಲಾದಿಕಾರಿಗಳೆ ಕೈ ಚೆಲ್ಲಿ ಕುಳಿತಂತಾಗಿದೆ ಎಂದರೆ ತಪ್ಪಾಗಲಾರದು.

ಇತ್ತ ನಿಮಗೆ ಒಳಿತು ಮಾಡಿಕೊಡುತ್ತೇವೆ ಬಂದು ಶರಣಾಗಿ ಎಂದು ಹಿರಿಯ ಮೇಲಾದಿಕಾರಿಗಳು ಆಶ್ವಾಸನೆ ನೀಡಿದರೂ ಇವರೇನು ಮಾಡಲಾಗುವುದಿಲ್ಲ ಎಂಬ ಕಟು ಸತ್ಯ ಅರಿತವರು ನ್ಯಾಯಾಲಯದ ಮುಂದೆ ಜಾಮೀನಿಗೆ ಅಂಗಲಾಚಿದ್ದಾರೆ.

ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತಾ!?: ಸಾಧಾರಣವಾಗಿ ದಾಖಲಾಗೊ ರಾಬರಿ ಪ್ರಕರಣಗಳಿಗೆ ಜಾಮೀನು ಮಂಜೂರು ಮಾಡಲು ಸ್ಥಳೀಯ ಹಾಗೂ ಹೈ ಕೊರ್ಟ್ ನಿರಾಕರಣೆ ಮಾಡುತ್ತದೆ ಅಂತರದಲ್ಲಿ ಜವಬ್ದಾರಿಯುತ ವಿದ್ಯಾವಂತ ಹಾಗೂ ಸಾರ್ವಜನಿಕರಿಗೆ ಕನ್ನಡಿಯಾಗಿ ಮಾದರಿಯಾಗಬೇಕಿದ್ದ ಪೊಲೀಸರೆ ಇಂತಹ ಕೃತ್ಯದಲ್ಲಿ ಪಾಲ್ಗೊಂಡಿರುವುದರಿಂದ ಜಾಮೀನು ಸಿಗುವುದು ಕಷ್ಟ ಎನ್ನುತ್ತಾರೆ ಹಲವರು.

ಅದೇನೆ ಇರಲಿ,ಪ್ರಕರಣವೊಂದರಲ್ಲಿ ೨೩ ಜನರ ಮೇಲೆ ೪೨೦ ಪ್ರಕರಣ ದಾಖಲಾದರೂ ಕೆಲವು ಅಪರಾಧಿಗಳು ಪೋಲೀಸರ ಕೈಗೆ ಸಿಗದೆ ಜಾಮೀನು ಪಡೆದಿದ್ದಾರೆ ಎಂಬ ಪ್ರಕರಣ, ಪೊಕ್ಸೊ ಪ್ರಕರಣವೊಂದರಲ್ಲಿ ಅಪರಾದಿ ಸಿಗದ ಪ್ರಕರಣ.ಇದನ್ನೆಲ್ಲ ನೋಡಿದರೆ ಪಟ್ಟಣ ಠಾಣೆಯ ಅವ್ಯವಸ್ಥೆ ಕುರಿತು ಡಿಜಿಪಿ, ಐಜಿಪಿ ಅವರೆ ಉತ್ತರಿಸಬೇಕಾಗಿದೆ.