ಮೈಸೂರು: ಮೂರನೇ ಕಾರ್ತೀಕ ಸೋಮವಾರದ ಪ್ರಯುಕ್ತ ಮೈಸೂರಿನ ಅಗ್ರಹಾರ ಕೆ.ಆರ್ ಪೊಲೀಸ್ ಸ್ಟೇಷನ್ ಪಕ್ಕದಲ್ಲಿರುವ ಮೃತ್ಯುಂಜಯೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
ಇಂದು ಸ್ವಾಮಿಗೆ ಬೆಣ್ಣೆ ಅಲಂಕಾರ ಮಾಡಿ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು.
ಮೃತ್ಯುಂಜಯೇಶ್ವರನಿಗೆ ಬೆಳ್ಳಿ ಮುಖವಾಡ ಧರಿಸಿ ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಾಕಡ, ತುಳಸಿ ಸೇರಿದಂತೆ ಅನೇಕ ಹೂಗಳಿಂದ ಅದ್ಬುತವಾಗಿ ಅಲಂಕಾರ ಮಾಡಿ ಪೂಜಿಸಲಾಯಿತು.
ದೇವಾಲಯದ ಶಿವಾರ್ಚಕರಾದ ಎಸ್. ಯೋಗಾನಂದ ಹಾಗೂ ಅವರ ಪುತ್ರ ಅಭಿನಂದನ್ ಅವರು ಮೃತ್ಯುಂಜಯೇಶ್ವರನಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಿದರು.
ದೇವರಿಗೆ ಅಭಿನಂದನ್ ಅವರು ಅಲಂಕಾರ ಮಾಡಿದ್ದು ನೂರಾರು ಮಂದಿ ಭಕ್ತರು ಕಣ್ತುಂಬಿ ಕೊಂಡರು.
