ಸೇವಾ ಕಾರ್ಯಗಳು ಯುವಕರಿಗೆ ಸ್ಪೂರ್ತಿ:ಎಲ್. ನಾಗೇಂದ್ರ

ಮೈಸೂರು: ಸೇವೆಯಂತಹ ಕಾರ್ಯಗಳು ಸಮಾಜವನ್ನು ಬದಲಾಯಿಸುತ್ತವೆ, ಯುವಕರು ಇಂತಹ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಎಲ್. ನಾಗೇಂದ್ರ ತಿಳಿಸಿದರು.

ವಿದ್ಯಾರಣ್ಯಪುರಂ ನಲ್ಲಿರುವ ಸಾರ್ವಜನಿಕ ಸುಬ್ಬಣ್ಣ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು, ನೋಟ್‌ಬುಕ್‌ಗಳು ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಎಸ್. ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗ ತನ್ನ 250ನೇ ಸೇವಾ ಕಾರ್ಯಕ್ರಮವನ್ನು ಆಚರಿಸಿದ ವೇಳೆ ನಾಗೇಂದ್ರ ಅವರು ಭಾಗವಹಿಸಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಮೈಸೂರು ನಗರ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾಶಂಕರ ಗೌಡ ಮಾತನಾಡಿ,
ವಿದ್ಯಾರ್ಥಿಗಳಿಗೆ ಹಣ್ಣು ಮತ್ತು ಶಿಕ್ಷಣ ಸಾಮಗ್ರಿಗಳನ್ನು ನೀಡುವ ಸಂವೇದನೆ ಸಮಾಜದಲ್ಲಿ ಮೌಲಿಕ ಬದಲಾವಣೆ ತರುತ್ತದೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮದ ರೂವಾರಿ ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷರಾದ ಎಸ್. ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ,
ಸೇವೆ, ಹಣ್ಣು ಹಂಚಿಕೆ ಮತ್ತು ಮಾನವೀಯತೆ ಇವೇ ನಮ್ಮ ಬಳಗದ ಮೌಲ್ಯಗಳು ಎಂದು ಹೇಳಿದರು.

ಇದು ಕೇವಲ ಸಹಾಯವಲ್ಲ, ಸಮಾಜಕ್ಕೆ ಕೃತಜ್ಞತೆ ವ್ಯಕ್ತಪಡಿಸುವ ನಮ್ಮ ಮಾರ್ಗ ಎಂದು ತಿಳಿಸಿದರು.

ಈ ಸೇವಾ ಕಾರ್ಯವನ್ನು ಮುಂದುವರಿಸುತ್ತೇವೆ, ಸ್ನೇಹ ಬಳಗವು ಮುಂದಿನ ದಿನಗಳಲ್ಲಿ ಇನ್ನಷ್ಟು ಆಶ್ರಮಗಳು, ವಿದ್ಯಾರ್ಥಿ ನಿಲಯಗಳು, ವಿಶೇಷ ಚೇತನ ಕೇಂದ್ರಗಳು ಮತ್ತು ವಯೋವೃದ್ಧರಿಗೆ ಸೇವೆ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ‌ ಮಾಜಿ ಉಪ ಮಹಾಪೌರ ಶೈಲೇಂದ್ರ,ಮಂಗಳೂರು ಮಹಿಳಾ ರತ್ನ ಪ್ರಶಸ್ತಿ ಪುರಸ್ಕೃತರು, ಸಮಾಜ ಸೇವಕಿ ವಿದ್ಯಾ,ಮಂಗಳಮುಖಿ ಪ್ರತಿನಿಧಿ ಸಿಂಚು ಗೌಡ, ⁠ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶಿವಕುಮಾರ್ ಕೊಳಸಂದಿ,ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ,
ಹಿರಿಯ ಕ್ರೀಡಾಪಟು ಮಹಾದೇವ್, ಛಾಯ, ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ, ಸಚಿಂದ್ರ , ಸುಬ್ಬಣ್ಣ ಹಾಸ್ಟೆಲ್ ನ ಗೋಪಾಲ್ ಗೌಡ, ಬಂಡಿಕೇರಿ ರವಿ,ಮಂಜುನಾಥ್, ಬಿಜೆಪಿ ಮುಖಂಡರಾದ ಪುರುಷೋತ್ತಮ್, ಭಾಸ್ಕರ್, ವಡಿವೇಲು ಚಟ್ಟಿಯಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ಶಿವಲಿಂಗ ಸ್ವಾಮಿ,ರಾಜು ಬಂಡೆಪ್ಪ,ಮಹೇಶ, ಮಂಜುನಾಥ್, ಎಸ್ ಪಿ ಅಕ್ಷಯ ಪ್ರಿಯಾದರ್ಶನ್ , ಹರ್ಷಿತ ಎಸ್ ನಾಗೇಶ್,ದತ್ತ ಹಾಗೂ ಅನೇಕ ಸಮಾಜ ಸೇವಕರು, ವಿದ್ಯಾರ್ಥಿಗಳು ಹಾಗೂ ಸ್ನೇಹ ಬಳಗದ ಸದಸ್ಯರು ಉಪಸ್ಥಿತರಿದ್ದರು.