ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯ ಜಮೀನಿನಲ್ಲಿ ಬೆಳೆದಿದ್ದ ಸುಮಾರು 17 ಕೆ.ಜಿ ತೂಕದ 50,000 ಬೆಲೆ ಬಾಳುವ ಗಾಂಜಾ ಬೆಳೆಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗ್ರಾಮದ ಬೋರಲಿಂಗೇಗೌಡ ಅವರು ತಮ್ಮ ಜಮೀನಿನಲ್ಲಿ ಗಾಂಜಾ ಬೆಳೆದಿದ್ದರು.ಮಂಡ್ಯ ಉಪ ಆಯುಕ್ತರ ಕಚೇರಿ ಎಸ್‌ಐ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್‌ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಿ ಗಾಂಜಾ ಸಮೇತ ಬೋರಲಿಂಗೇಗೌಡನನ್ನು ಬಂಧಿಸಿದ್ದಾರೆ.
ಎನ್‌ಡಿಪಿಎಸ್ ಅಡಿಯಲ್ಲಿ ಕೆ.ಆರ್. ಪೇಟೆ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಬಕಾರಿ ಎಸ್‌ಐ ನಾಗಭೂಷಣ್ ತಿಳಿಸಿದರು.