ಪ್ರಿಯತಮನ ಜತೆ ಸೇರಿ ತಾಯಿಯ ಕೊಂ*ದ 16 ರ ಪೋರಿ!

Spread the love

ಹೈದರಾಬಾದ್: ಏನ್ ಕಾಲ ಬಂತೋ ಏನು ಕಥೆಯೊ ಸಣ್ಣ,ಪುಟ್ಟವರೆಲ್ಲ ಕೊಲೆಗಡುಕರಾಗ್ತಾ ಇದಾರೆ!

ತಾನು ಪ್ರೀತಿಸುತ್ತಿದ್ದ ಯುವಕನೊಂದಿಗೆ ಹೋಗಲು ಬಿಡದೆ ವಿರೋಧ ಮಾಡಿದ್ದಕ್ಕೆ ಪಾಪಿ ಮಗಳು ಜನ್ಮ ಕೊಟ್ಟ ತಾಯಿಯನ್ನೇ ಕೊಂದಿದ್ದಾಳೆ.

ಇನ್ನೂ 16 ವರ್ಷ, 10ನೇ ತರಗತಿ ಓದುತ್ತಿದ್ದ ಹುಡುಗಿ ತನ್ನ ಪ್ರಿಯತಮನೊಂದಿಗೆ ಸೇರಿ ತನ್ನನ್ನು ಹೆತ್ತು,ಹೊತ್ತು ಸಾಕಿ ಬೆಳೆಸಿದ ಅಮ್ಮನನ್ನು ಕೊಂದಿದ್ದಾಳೆ!.

ಇಂತಹ ಹೇಯ ಘಟನೆ ಹೈದರಾಬಾದ್ ನ ಜೀಡಿಮೆಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಲಕಿಗೆ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಯುವಕನೊಬ್ಬನ ಪರಿಚಯವಾಗಿ,ಪ್ರೀತಿಗೆ ತಿರುಗಿದೆ,ಆತನಿಗೂ ಒಪ್ಪಗೆ ಆಗಿ ಚಾಟಿಂಗ್ ನಲ್ಲಿದ್ದರು.

ಜೂನ್​ 19 ರಂದು ಬಾಲಕಿ ಮನೆ ಬಿಟ್ಟು ಹೋಗಿದ್ದಳು.ಆಕೆ ಹೋದ ವಿಚಾರ ಗೊತ್ತಾಗಿ ತಾಯಿ ಅದೇ ದಿನ ಪೊಲೀಸರಿಗೆ ದೂರು ನೀಡಿದ್ದರು.ಹುಡುಕಾಟ ನಡೆಸಿದ ಪೊಲೀಸರು ಜೂ. 20 ರಂದು ಬಾಲಕಿಯನ್ನು ಪತ್ತೆ ಮಾಡಿ ಕರೆತಂದು ತಾಯಿಗೆ ಒಪ್ಪಿಸಿದ್ದರು.

ಅಂದಿನಿಂದ, ಈ ವಿಷಯವಾಗಿ ತಾಯಿ ಮತ್ತು ಮಗಳ ನಡುವೆ ಜಗಳವಾಗುತ್ತಿತ್ತು. ತಾಯಿ ಮಗಳ ಪ್ರೀತಿಯನ್ನು ಒಪ್ಪಿಕೊಳ್ಳದೆ ಇನ್ನೂ ಚಿಕ್ಕ ವಯಸ್ಸು ಓದು,ಮುಂದೆ‌ ಬಾ ನಂತರ ನೋಡೋಣ,ಈ ಪ್ರೀತಿ ಗೀತಿ ಎಲ್ಲಾ‌ಬುಡು ಎಂದು ಹೇಳಿದ್ದಾರೆ.ಇದರಿಂದ ಕೋಪಗೊಂಡ ಪುತ್ರಿ, ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ ಈ ವಿಷಯವನ್ನು ತನ್ನ ಪ್ರಿಯಕರನಿಗೆ ತಿಳಿಸಿದ್ದಾಳೆ.

ಸೋಮವಾರ ಮಧ್ಯರಾತ್ರಿ ಪ್ರಿಯಕರ ತನ್ನ ಸಹೋದರನೊಂದಿಗೆ ಬಾಲಕಿಯ ಮನೆಗೆ ಬಂದಿದ್ದಾನೆ.

ನಂತರ ಮೂವರೂ ಸೇರಿ ತಾಯಿಯ ಕುತ್ತಿಗೆಗೆ ಹಗ್ಗ ಕಟ್ಟಿ, ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ಬಾಲಕಿಯ ಪ್ರಿಯಕರ ಮತ್ತು ಆತನ ಸಹೋದರ ಅಲ್ಲಿಂದ ಪರಾರಿಯಾಗಿದ್ದರು.

ಬೆಳಿಗ್ಗೆ ಸ್ಥಳೀಯರಿಗೆ ವಿಷಯ ಗೊತ್ತಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ ಎಂದು ಬಾಲಾನಗರ ಡಿಸಿಪಿ ಸುರೇಶ್ ಕುಮಾರ್ ತಿಳಿಸಿದ್ದಾರೆ.