ಭಾರತ ಗೆಲುವಿಗೆ ಪ್ರಾರ್ಥಿಸಿ 101 ತೆಂಗಿನಕಾಯಿ ಈಡುಗಾಯಿ

Spread the love

ಮೈಸೂರು: ಭಾನುವಾರ ದುಬೈನಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ
ಭಾರತದ ಗೆಲುವಿಗೆ ಪ್ರಾರ್ಥಿಸಿ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು 101 ತೆಂಗಿನಕಾಯಿ ಒಡೆದರು.

ಈ ಪಂದ್ಯವು ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನಡುವೆ ನಡೆಯಲಿದ್ದು, ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿ ,101 ತೆಂಗಿನ ಕಾಯಿಗಳನ್ನು ಈಡುಗಾಯಿ ಒಡೆಯಲಾಯಿತು.

ಈ ಪೂಜಾ ಕಾರ್ಯದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾಮಗಾರಿ ಅಧ್ಯಕ್ಷ ಸಿ ಜಿ ಗಂಗಾಧರ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ಕೇದಾರ್ ಲೋಕೇಶ್, ಭಾಗ್ಯಮ್ಮ, ಕೃಷ್ಣಪ್ಪ, ಪ್ರಭಾಕರ್, ಹನುಮಂತಯ್ಯ, ಬಸವರಾಜು, ಕುಮಾರ್, ರಘು ಅರಸ್, ಎಳನೀರು ರಾಮಣ್ಣ, ಪ್ರದೀಪ್, ಬಸವರಾಜು, ಆನಂದ್ ಗೌಡ, ದರ್ಶನ್ ,ಗೀತಾ ಗೌಡ, ಗಣೇಶ್ ಪ್ರಸಾದ್, ರವೀಶ್, ರವಿ ನಾಯಕ್, ಶಿವರಾಂ, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.

ಭಾರತ ತಂಡದ ಆಟಗಾರರ ಫೋಟೊಗಳನ್ನು ಹಿಡಿದು ಗೆದ್ದುಬರುವಂತೆ ಪ್ರಾರ್ಥಿಸಿದರು.